ಬಿಬಿಎಂಪಿ ಮೇಯರ್ ಚುನಾವಣೆಗೆ ದಿನ ನಿಗದಿ

Update: 2017-09-09 08:58 GMT

ಬೆಂಗಳೂರು, ಸೆ.9: ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.

51ನೆ ಮೇಯರ್ ಹಾಗೂ 50ನೆ ಉಪ ಮೇಯರ್ ಚುನಾವಣೆಯು ಸೆ.28 ರಂದು ಬೆಳಗ್ಗೆ 11:30ಕ್ಕೆ ನಡೆಯಲಿದೆ.

ಸ್ಥಾಯಿ ಸಮಿತಿಯ ಅವಧಿ ಅಕ್ಟೋಬರ್‌ಗೆ ಕೊನೆಗೊಳ್ಳಲಿದೆ. ಹೀಗಾಗಿ 12 ಸ್ಥಾಯಿ ಸಮಿತಿಯ ಅಧ್ಯಕ್ಷರು, ಸದಸ್ಯರ ಆಯ್ಕೆಗೆ ಪ್ರತ್ಯೇಕ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News