ಗೌರಿ ಲಂಕೇಶ್ ಹತ್ಯೆ ಹಾಗೂ ಪತ್ರಕರ್ತನ ಬಂಧನ ಒಂದೇ ನಾಣ್ಯದ ಎರಡು ಮುಖ: ಪಾಂಡ್ರು

Update: 2017-09-09 15:33 GMT

ಬೆಂಗಳೂರು, ಸೆ. 9:ಗೌರಿ ಲಂಕೇಶ್ ಹತ್ಯೆ ಹಾಗೂ ವಾರ್ತಾಭಾರತಿ ವರದಿಗಾರನ ಬಂಧನ ಅಭಿವ್ಯಕಿತಿ ಸ್ವಾತಂತ್ರ್ಯ ಹಿಮ್ಮೆಟ್ಟಿಸುವ ಪ್ರಯತ್ನವಾಗಿದ್ದು, ಎರಡೂ ಪ್ರಕರಣಗಳು ರಾಜ್ಯದಲ್ಲಿ ಕೋಮುವಾದಿಗಳ ವಿಜೃಂಭಣೆಯನ್ನು ಪ್ರತಿನಿಧಿಸುತ್ತದೆ. ಈ ಎರಡೂ ಘಟನೆಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಎಸ್.ಪಾಂಡ್ರು ಹೇಳಿದ್ದಾರೆ.

ಮಾಧ್ಯಮವನ್ನು ಸಂವಿಧಾನದ ನಾಲ್ಕನೆಯ ಸ್ತಂಭ ಎಂದು ಜನಪ್ರತಿನಿಧಿಗಳು ಬಾಯಿಮಾತಿನಲ್ಲಿ ಹೇಳುತ್ತಾರೆಯೇ ವಿನಹ ಕಾರ್ಯರೂಪದಲ್ಲಿ ಅದು ಇಲ್ಲದಿರುವುದು ವಿಪರ್ಯಾಸ. ಗೌರಿ ಲಂಕೇಶ್ ಹಾಗೂ ‘ವಾರ್ತಾಭಾರತಿ’ ಪತ್ರಿಕಾ ಸಂಸ್ಥೆ ಪ್ರಜಾಪ್ರಭುತ್ವದ ನೈಜ ಆಶಯಗಳನ್ನು ನೆರವೇರಿಸಿದ್ದಾರೆ. ಅಂತಹ ವ್ಯಕ್ತಿ ಸಂಸ್ಥೆಗಳ ಮೇಲಿನ ದಾಳಿಯು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News