ಇಸ್ರೇಲ್ ಪ್ರಧಾನಿ ಪತ್ನಿಯಿಂದ ‘ಅಡುಗೆಮನೆ’ ಭ್ರಷ್ಟಾಚಾರ?

Update: 2017-09-09 18:12 GMT

ಜೆರುಸಲೇಂ,ಸೆ.9: ಇಸ್ರೇಲ್ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಬಾಣಸಿಗರಿಲ್ಲವೆಂದು ಸುಳ್ಳು ಹೇಳಿ, ಸರಕಾರದ ಹಣವನ್ನು ದುರುಪಯೋಗಪಡಿಸಿದ ಪ್ರಕರಣದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪತ್ನಿ ಸಾರಾ ಅವರನ್ನು ವಿಚಾರಣೆಗೊಳಪಡಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.

ಪ್ರಧಾನಿಯ ನಿವಾಸದಲ್ಲಿ ಬಾಣಸಿಗರಿಲ್ಲವೆಂದು ಹೇಳಿಕೊಂಡು,ರೆಸ್ಟೊರೆಂಟ್‌ಗಳಿಂದ ಆಹಾರವನ್ನು ತರಿಸಿಕೊಳ್ಳುತ್ತಿರುವುದಾಗಿ ಹೇಳಿ, ಸಾರಾ ಅವರು ಸರಕಾರದಿಂದ 3.59 ಶೆಕ್ಕಲ್ (ಸುಮಾರು 65 ಲಕ್ಷ ರೂ.)ಹಣವನ್ನು ಪಡೆದುಕೊಂಡಿದ್ದಾರೆಂದು ಆರೋಪಿಸಲಾಗಿದೆ.

  ಸಾರಾ ಅವರನ್ನು ವಿಚಾರಣೆಗೊಳಪಡಿಸುವ ನಿರ್ಧಾರವನ್ನು ಇಸ್ರೇಲ್ ಸರಕಾರದ ಅಟಾರ್ನಿ ಜನರಲ್ ಅಧಿಕೃತವಾಗಿ ಪ್ರಕಟಿಸಿದ್ದಾರೆಂದು ಕಾನೂನು ಇಲಾಖೆ ಶನಿವಾರ ಬಹಿರಂಗಪಡಿಸಿದೆ.

 ಸಾರಾ ಅವರ ಪತಿ, ಪ್ರಧಾನಿ ನೆತನ್ಯಾಹು ಕೂಡಾ ಅತ್ಯಂತ ಬೆಲೆಬಾಳುವ ಉಡುಗೊರೆಗಳನ್ನು ಸ್ವೀಕಾರ ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News