ಪಾರ್ಕಿಂಗ್ ವಿಚಾರದಲ್ಲಿ ಆರಂಭಗೊಂಡ ಜಗಳ 5 ಮಂದಿಯ ಕೊಲೆಯಲ್ಲಿ ಅಂತ್ಯವಾಯ್ತು!

Update: 2017-09-18 09:55 GMT

ಹರ್ಯಾಣ, ಸೆ.18: ಪಾರ್ಕಿಂಗ್ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಆರಂಭಗೊಂಡ ಜಗಳವೊಂದು 5 ಮಂದಿಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಫರೀದಾಬಾದ್ ಜಿಲ್ಲೆಯ ಪಲ್ವಾಲಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿ ರವಿವಾರ ರಾತ್ರಿ ಎರಡು ಕುಟುಂಬಗಳ ನಡುವೆ ಜಗಳ ಆರಂಭಗೊಂಡಿತ್ತು. ಕೆಲ ವರ್ಷಗಳಿಂದಲೇ ಈ ಕುಟುಂಬಗಳ ನಡುವೆ ಜಗಳ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಕೊಲೆಗಳ ನಂತರ ಗ್ರಾಮದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು. ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಎರಡು ಕುಟುಂಬಗಳ 5  ಸದಸ್ಯರನ್ನು ಪರಸ್ಪರ ಗುಂಡಿಕ್ಕಿ ಕೊಲ್ಲಲಾಯಿತು. ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮೃತಪಟ್ಟವರನ್ನು ಶ್ರೀಚಂದ್, ರಾಜೀಂದರ್, ಈಶ್ವರ್, ನಾನೀ ಹಾಗೂ ದಾವೀಂದರ್ ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ 25  ಆರೋಪಿಗಳ ವಿರುದ್ಧ ಖೇರಿಪುಲ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದ್ದು, ಪೊಲೀಸ್ ಕಮಿಷನರ್ ಹನೀಫ್ ಖುರೇಷಿ ಪ್ರಕರಣದ ತನಿಖೆಗೆ ವಿಶೇಷ ತಂಡವೊಂದನ್ನು ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News