ನಗರದ ಇಡೀ ಪೊಲೀಸ್ ವ್ಯವಸ್ಥೆಯನ್ನೇ ಡಿಸ್ಮಿಸ್ ಮಾಡಿದ ಸರ್ಕಾರ!

Update: 2017-09-19 07:29 GMT

ಫಿಲಿಪೈನ್ಸ್, ಸೆ.19: ಮೂವರು ಅಪ್ರಾಪ್ತರನ್ನು ಕೆಲ ಪೊಲೀಸರು ಕೊಂದ ಆರೋಪದಲ್ಲಿ ಹಾಗೂ ಕೆಲ ಪೊಲೀಸರು ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡಿದ ಆರೋಪದಲ್ಲಿ ನಗರದ ಇಡೀ ಪೊಲೀಸ್ ವ್ಯವಸ್ಥೆಯನ್ನೇ ಫಿಲಿಪೈನ್ಸ್ ಸರಕಾರ ವಜಾ ಮಾಡಿದೆ.

1,200 ಸಿಬ್ಬಂದಿ ಇರುವ ಕಾಲ್ಕೂನ್ ಸಿಟಿ ಪೊಲೀಸ್ ವ್ಯವಸ್ಥೆಯನ್ನು ವಜಾ ಮಾಡಲಾಗಿದ್ದು, ಬೇರೆ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗುವುದು ಎಂದು ಮನಿಲಾದ ಮೆಟ್ರೋಪಾಲಿಟನ್ ಪೊಲೀಸ್ ಮುಖ್ಯಸ್ಐ ಆಸ್ಕರ್ ಅಲ್ಬಯಾಲ್ಡೆ ತಿಳಿಸಿದ್ದಾರೆ.

45 ದಿನಗಳ ಕಾಲ ಅಧಿಕಾರಿಗಳು ಪುನರ್ ತರಬೇತಿ ನೀಡಲಿದ್ದಾರೆ. ನಿರಪರಾಧಿಗಳೆಂದು ಸಾಬೀತಾದ ಪೊಲೀಸರನ್ನು ಬೇರೆ ಠಾಣೆಗಳಿಗೆ ನೇಮಿಸಲಾಗುವುದು. ಮಾದಕ ಜಾಲದ ವಿರುದ್ಧದ ದಾಳಿಯಲ್ಲಿ 17 ವರ್ಷದ ವಿದ್ಯಾರ್ಥಿಯನ್ನು ಕೊಂದ ಆರೋಪವಿರುವ ಕಾಲ್ಕೂನ್ ನ ನಾಲ್ವರು ಪೊಲೀಸರ ವಿರುದ್ಧ ಚಿತ್ರಹಿಂಸೆ ನೀಡಿರುವ ಆರೋಪವೂ ಇದ್ದು, ಈ ಬಗ್ಗೆ ತನಿಖೆ ಆರಂಭವಾಗಿದೆ.

ಇತರ ಇಬ್ಬರು ಅಪ್ರಾಪ್ತರ ಪೋಷಕರು ಕಾಲ್ಕೂನ್ ಅಧಿಕಾರಿಗಳ ವಿರುದ್ಧ ಕೊಲೆ, ಚಿತ್ರಹಿಂಸೆಗೆ ಸಂಬಂಧಿಸಿದ ದೂರು ನೀಡಿದ್ದಾರೆ. ಮಾದಕ ದ್ರವ್ಯ ಜಾಲದ ವಿರುದ್ಧ ನಡೆದ ದಾಳಿಯ ಸಂದರ್ಭ 13 ಪೊಲೀಸರು ಮನೆಯೊಂದನ್ನು ದರೋಡೆಗೈದ ದೃಶ್ಯಾವಳಿಗಳು ಕೂಡ ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News