ಕೇರಳದ ಪ್ರಪ್ರಥಮ ಮಹಿಳಾ ಡಿಜಿಪಿ ಶ್ರೀಲೇಖಾ

Update: 2017-09-21 10:33 GMT

ತಿರುವನಂತಪುರಂ,ಸೆ.21: ಕೇರಳದ ಬಂದೀಖಾನೆ ಜೈಲು ಎಡಿಜಿಪಿ ಶ್ರೀಲೇಖಾ  ಡಿಜಿಪಿ ರ‍್ಯಾಂಕ್ ಪಡೆಯಲಿರುವ ತಲುಪುವ ಪ್ರಥಮ ಮಹಿಳಾ  ಐಪಿಎಸ್ ಅಧಿಕಾರಿಯಾಗಿದ್ದಾರೆ. ಅವರೇ ಕೇರಳದಲ್ಲಿ ಮೊದಲ ಮಹಿಳಾ ಐಪಿಎಸ್ ಆಗಿದ್ದವರು.  1988ರಲ್ಲಿ  ಕೋಟ್ಟಯಂನ ಎಎಸ್ಪಿಯಾಗಿ  ಅವರು  ನೇಮಕಗೊಂಡಿದ್ದರು. 1991ರಲ್ಲಿ ತೃಶೂರಿನಲ್ಲಿ ಕೇರಳದ ಮೊದಲ ಮಹಿಳಾ ಎಸ್ಪಿಯಾಗಿ ನೇಮಕಗೊಂಡಿದ್ದರು.

ವಿಜಿಲೆನ್ಸ್ ಸೇವೆಯಲ್ಲಿರುವಾಗ ವಿಶೇಷ ಸೇವೆಗಾಗಿರುವ ರಾಷ್ಟ್ರಪತಿಯವರ ಪೊಲೀಸ್ ಪದಕ ಅವರಿಗೆ ಲಭಿಸಿದೆ.ಈಗ ಜೈಲು ಮುಖ್ಯಸ್ಥೆಯಾಗಿಯೂ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ. ಕೇರಳ ಸರಕಾರ  ಶ್ರೀಲೇಖಾರ ಜೊತೆಗೆ  ಇತರ ಮೂವರಿಗೆ ಡಿಜಿಪಿ ರ‍್ಯಾಂಕ್ ಕೊಡಲು  ತೀರ್ಮಾನಿಸಿದೆ. ಕೇರಳ ಸರಕಾರದ ಮುಖ್ಯ ಕಾರ್ಯದರ್ಶಿ ನಳಿನಿ ನೆಟ್ಟೊ ನೇತೃತ್ವದ ಸಮಿತಿ 30ವರ್ಷಗಳಿಂದ ಸೇವೆಯಲ್ಲಿರುವ ಐಪಿಎಸ್ ಅಧಿಕಾರಿಗಳಿಗೆ  ಡಿಜಿಪಿ ರ‍್ಯಾಂಕ್ ನೀಡಬೇಕೆಂದು ಶಿಫಾರಸು ಮಾಡಿತ್ತು. ಈ ಸಮಿತಿಯಲ್ಲಿ  ಗೃಹ ಕಾರ್ಯದರ್ಶಿ ಸುಬ್ರತೋ ವಿಶ್ವಾಸ್, ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ  ಇನ್ನಿಬ್ಬರು ಸದಸ್ಯರಾಗಿದ್ದರು.  ನಳಿನಿ ನೆಟ್ಟೊ ಸೇವೆಯಿಂದ ನಿವೃತ್ತರಾಗುವ ಮೊದಲು ಸರಕಾರಕ್ಕೆ ಶಿಫಾರಸನ್ನು ಸಲ್ಲಿಸಿದ್ದರು.  ಕೇರಳ ಸರಕಾರ ಶಿಫಾರಸ್ಸನ್ನು  ಪುರಸ್ಕರಿಸಿದ್ದು, ಕೇಂದ್ರ ನಾಲ್ವರಿಗೆ ಡಿಜಿಪಿ ರ‍್ಯಾಂಕ್ ನೀಡಲು ಅನುಮತಿ ನೀಡಿದೆ.

ಡಿಜಿಪಿ ರ‍್ಯಾಂಕ್ ಪಡೆಯುವ  ನಾಲ್ವರೂ 1987ರ ಬ್ಯಾಚ್‍ನ ಐಪಿಎಸ್ ಅಧಿಕಾರಿಗಳು ಆಗಿದ್ದಾರೆ. ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿರುವ ಶ್ರೀಲೇಖಾ ಈಗ ಜೈಲು ಎಡಿಜಿಪಿಯಾಗಿದ್ದಾರೆ. ಇನ್ನೋರ್ವರು ತಚ್ಚಂಕರಿ ಅಗ್ನಿಶಾಮಕ ದಳದ ಮುಖ್ಯಸ್ಥರಾಗಿದ್ದಾರೆ.  ಎಸ್‍ಪಿಜಿ ನಿರ್ದೇಶಕರಾಗಿ ಈಗ ಕೇಂದ್ರ ಸರಕಾರದ ಸೇವೆಯಲ್ಲಿ ಡೆಪ್ಯುಟೇಶನ್‍ನಲ್ಲಿರುವ ಅರುಣ್ ಕುಮಾರ್ ಸಿನ್ಹಾ ಮತ್ತು ಬೆಟಾಲಿಯನ್ ಎಡಿಜಿಪಿ ಸುಧೇಶ್‍ಕುಮಾರ್‍ಗೆ ಡಿಜಿಪಿ ರ‍್ಯಾಂಕ್ ಪಡೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News