ಬನಾರಸ್ ವಿವಿಯಲ್ಲಿ ಲಾಠಿ ಚಾರ್ಜ್ ಪ್ರಕರಣ: ಉಪ ಕುಲಪತಿಗೆ ಸಮನ್ಸ್

Update: 2017-09-26 06:17 GMT

ವಾರಾಣಸಿ, ಸೆ.26: ಬನಾರಸ್ ಹಿಂದೂ ವಿಶ್ವ ವಿದ್ಯಾನಿಲಯದಲ್ಲಿ ಇತ್ತೀಚೆಗೆ ಪ್ರತಿಭಟನಾನಿರತ ಸಾವಿರಾರು ವಿದ್ಯಾರ್ಥಿನಿಗಳ ಮೇಲೆ ಲಾಠಿಚಾರ್ಜ್ ಹಾಗೂ ಹಿಂಸಾಚಾರ ಘಟನೆಗೆ ಸಂಬಂಧಿಸಿ ಮಾನವಸಂಪನ್ಮೂಲ ಸಚಿವಾಲಯ ಬನಾರಸ್ ವಿವಿಯ ಕುಲಪತಿ ಜಿ.ಸಿ.ತ್ರಿಪಾಠಿಗೆ ಸಮನ್ಸ್ ಜಾರಿಗೊಳಿಸಿ ದಿಲ್ಲಿಗೆ ಆಗಮಿಸುವಂತೆ ಸೂಚಿಸಿದೆ.

ತ್ರಿಪಾಠಿ ಮಂಗಳವಾರ ಬೆಳಗ್ಗೆಯೇ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ.

ಪ್ರತಿಭಟನಾ ನಿರತ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ತ್ರಿಪಾಠಿಗೆ ಎಚ್‌ಆರ್‌ಡಿ ಸಚಿವಾಲಯ ಸಮನ್ಸ್ ನೀಡಿದೆ ಎಂದು ಹೇಳುತ್ತಿವೆ. ಇದನ್ನು ಅಲ್ಲಗಳೆದಿರುವ ವಿವಿಯ ವಕ್ತಾರ, ಬನಾರಸ್ ವಿವಿಯ ತ್ರೈಮಾಸಿಕ ಸಭೆ ಮರು ನಿಗದಿಯಾಗಿದ್ದು, ತ್ರಿಪಾಠಿ ಸಭೆಯಲ್ಲಿ ಹಾಜರಾಗಲು ತೆರಳಿದ್ದಾರೆ ಎಂದಿದ್ದಾರೆ.

ವಾರಾಣಸಿ ಕಮಿಶನರ್ ನಿತಿನ್ ರಾಜ್ಯದ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್‌ಗೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ವಿವಿ ಆವರಣದಲ್ಲಿ ನಡೆದ ಹಿಂಸಾಚಾರಕ್ಕೆ ಬಿಎಚ್‌ಯು ಆಡಳಿತ ಮಂಡಳಿಯೇ ಕಾರಣ. ಸಂತ್ರಸ್ತೆ ವಿದ್ಯಾರ್ಥಿಯ ದೂರನ್ನು ಸೂಕ್ಷ್ಮವಾಗಿ ನಿಭಾಯಿಸಲು ವಿಫಲವಾಗಿರುವ ವಿಶ್ವವಿದ್ಯಾಲಯ ಪರಿಸ್ಥಿತಿಯನ್ನು ನಿಭಾಯಿಸಲು ಎಡವಿದೆ ಎಂದು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News