ಶಶಿಕಲಾರ ಪತಿ ನಟರಾಜನ್ ಆರೋಗ್ಯ ಸ್ಥಿತಿ ಗಂಭೀರ

Update: 2017-09-26 08:04 GMT

ಚೆನ್ನೈ, ಸೆ.26: ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಬೆಂಗಳೂರಿನ ಜೈಲಿನಲ್ಲಿರುವ ಎಐಎಡಿಎಂಕೆ ಅಧ್ಯಕ್ಷ್ಷೆ ವಿ.ಕೆ. ಶಶಿಕಲಾರ ಪತಿ ನಟರಾಜನ್‌ರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚೆನ್ನೈನ ಪೆರುಂಬಾಕ್ಕಮ್‌ನಲ್ಲಿರುವ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಿವರ್ ವೈಫಲ್ಯಕ್ಕೆ ಒಳಗಾಗಿರುವ ನಟರಾಜನ್ ಕಳೆದ 9 ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ‘‘ಪ್ರಸ್ತುತ ನಟರಾಜನ್ ಲಿವರ್ ಐಸಿಯುನಲ್ಲಿದ್ದು, ಅವರು ಕಿಡ್ನಿ ವೈಫಲ್ಯ, ಶ್ವಾಸಕೋಶದ ಸೋಂಕಿನ ಸಮಸ್ಯೆಯಿಂದಲೂ ಬಳಲುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಕಿಡ್ನಿ ಹಾಗೂ ಲಿವರ್ ಕಸಿ ಚಿಕಿತ್ಸೆಗೆ ಸಲಹೆ ನೀಡಲಾಗಿದೆ’’ ಎಂದು ಡಾ. ಕೆ. ಇಲ್ಲನ್‌ಕುಮಾರನ್ ಹೇಳಿದ್ದಾರೆ.

ಫೆಬ್ರವರಿ 5 ರಂದು ಉಸಿರಾಟದ ಸಮಸ್ಯೆಯಿಂದಾಗಿ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ಗ್ಲೋಬಲ್ ಆಸ್ಪತ್ರೆಗೆ ಸ್ಥಳಾಂತರಗೊಂಡಿರುವ ನಟರಾಜನ್ ಲಿವರ್ ಕಸಿ ಸರ್ಜನ್ ಡಾ. ಮುಹಮ್ಮದ್‌ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ವಾರಗಳಿಂದ ನಟರಾಜನ್ ಆರೋಗ್ಯಸ್ಥಿತಿ ಹದೆಗೆಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News