"ಅಫ್ಘಾನ್‌ನಲ್ಲಿ ಭಾರತೀಯ ಸೇನೆಯ ಅನುಪಸ್ಥಿತಿಗೆ ಪಾಕ್ ಕಾರಣ"

Update: 2017-10-05 15:12 GMT

ವಾಶಿಂಗ್ಟನ್, ಅ. 5: ಪಾಕಿಸ್ತಾನದ ನಿಲುವನ್ನು ಆಧರಿಸಿ ತನ್ನ ಸೈನಿಕರನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ನಿರ್ಧಾರವನ್ನು ಭಾರತ ತೆಗೆದುಕೊಂಡಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಬುಧವಾರ ಹೇಳಿದ್ದಾರೆ.

ಕಾಂಗ್ರೆಸ್ ವಿಚಾರಣೆಯ ವೇಳೆ ಸಾಕ್ಷ ನುಡಿದ ಮ್ಯಾಟಿಸ್, ಯುದ್ಧಪೀಡಿತ ಅಫ್ಘಾನಿಸ್ತಾನಕ್ಕೆ ಭಾರತ ನೀಡಿರುವ ದೇಣಿಗೆಗಳನ್ನು ಪ್ರಶಂಸಿಸಿದರು.

''ಅಫ್ಘಾನಿಸ್ತಾನದ ವಿಷಯದಲ್ಲಿ ಭಾರತ ಸಮಗ್ರ ನಿಲುವೊಂದನ್ನು ತೆಗೆದುಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಭಾರತೀಯ ಸೈನಿಕರ ಅನುಪಸ್ಥಿತಿಯನ್ನು ನೀವು ಗಮನಿಸಿದ್ದೀರಿ. ಯಾಕೆಂದರೆ, ಅಫ್ಘಾನಿಸ್ತಾನದಲ್ಲಿ ಭಾರತೀಯ ಸೈನಿಕರ ಉಪಸ್ಥಿತಿಯಿಂದ ಪಾಕಿಸ್ತಾನ ಸಮಸ್ಯೆ ಅನುಭವಿಸುತ್ತದೆ'' ಸಂಸದರೊಬ್ಬರು ಪ್ರಶ್ನೆಗೆ ಉತ್ತರಿಸುತ್ತಾ ಅವರು ಹೇಳಿದರು.

ಭಾರತ-ಪಾಕ್ ಗಡಿ ವ್ಯಾಪಾರದಿಂದ ಇಬ್ಬರಿಗೂ ಲಾಭ

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮುಕ್ತ ಗಡಿ ವ್ಯಾಪಾರವು ಪ್ರಾದೇಶಿಕ ಸ್ಥಿರತೆಯನ್ನು ತರಲು ನೆರವಾಗುತ್ತದೆ ಎಂದು ಜೇಮ್ಸ್ ಮ್ಯಾಟಿಸ್ ಅಭಿಪ್ರಾಯಪಟ್ಟರು.

''ವ್ಯಾಪಾರಕ್ಕಾಗಿ ತಮ್ಮ ಗಡಿಯನ್ನು ತೆರೆಯಲು ಭಾರತ ಮತ್ತು ಪಾಕಿಸ್ತಾನಗಳಿಗೆ ಸಾಧ್ಯವಾದರೆ, ಅದು ಎರಡೂ ದೇಶಗಳ ಆರ್ಥಿಕ ಸಮೃದ್ಧಿಗೆ ಕಾರಣವಾಗುತ್ತದೆ ಹಾಗೂ ಅದು ಇಡೀ ವಲಯಕ್ಕೆ ನೆಮ್ಮದಿಯನ್ನು ತರುತ್ತದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News