ಬಲೂಚಿಸ್ತಾನದ ದರ್ಗಾ ಸಮೀಪ ಆತ್ಮಾಹುತಿ ಬಾಂಬ್ ದಾಳಿ: 13 ಮಂದಿ ಮೃತ್ಯು

Update: 2017-10-05 15:15 GMT

ಹೊಸದಿಲ್ಲಿ, ಅ.5: ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕಾನ್ ಸ್ಟೇಬಲ್ ಸೇರಿದಂತೆ 13 ಮಂದಿ ಮೃತಪಟ್ಟು ಹಲವರು ಗಾಯಗೊಂಡ ಘಟನೆ ಬಲೂಚಿಸ್ತಾನದ ಝಾಲ್ ಮಗ್ಸಿ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ದರ್ಗಾವೊಂದಕ್ಕೆ ಆಕ್ರಮಣಕಾರಿ ನುಗ್ಗಲು ಪ್ರವೇಶಿಸಿದ್ದು, ಆತನನ್ನು ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಆತ ತನ್ನನ್ನೇ ಸ್ಫೋಟಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅಸಾದುಲ್ಲಾ ಕಾಕರ್ ಹೇಳಿದ್ದಾರೆ.

ಘಟನೆಯಲ್ಲಿ 13 ಮಂದಿ ಮೃತಪಟ್ಟಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಘಟನಾಸ್ಥಳದಲ್ಲಿ 12 ಮೃತದೇಹಗಳು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News