ಸಿಆರ್‌ಪಿಎಫ್‌ನಿಂದ ಕಾಶ್ಮೀರಕ್ಕೆ 21,000 ಪ್ಲಾಸ್ಟಿಕ್ ಗುಂಡುಗಳ ರವಾನೆ

Update: 2017-10-07 12:28 GMT

ಮೀರತ್,ಅ.7: ಕಾಶ್ಮೀರ ಕಣಿವೆಯಲ್ಲಿನ ಬೀದಿ ಪ್ರತಿಭಟನೆಗಳನ್ನು ಎದುರಿಸಲು ಸಿಆರ್‌ಪಿಎಫ್ ಹೊಸದಾಗಿ ಅಭಿವೃದ್ಧಿಗೊಳಿಸಿರುವ ಮತ್ತು ಕಡಿಮೆ ಮಾರಕವಾಗಿರುವ 21,000 ಪ್ಲಾಸ್ಟಿಕ್ ಗುಂಡುಗಳನ್ನು ಅಲ್ಲಿಗೆ ರವಾನಿಸಿದೆ ಎಂದು ಪಡೆಯ ಮಹಾನಿರ್ದೇಶಕ ಆರ್.ಆರ್.ಭಟ್ನಾಗರ್ ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯು ಅಭಿವೃದ್ಧಿಗೊಳಿ ಸಿರುವ ಮತ್ತು ಪುಣೆಯ ಆರ್ಡನನ್ಸ್ ಫ್ಯಾಕ್ಟರಿಯು ತಯಾರಿಸಿರುವ ಈ ಪ್ಲಾಸ್ಟಿಕ್ ಗುಂಡು ಗಳನ್ನು ಎಕೆ ರೈಫಲ್‌ಗಳಲ್ಲಿ ಬಳಸಬಹುದಾಗಿದೆ ಮತ್ತು ಭಾರೀ ಟೀಕೆಗೆ ಗುರಿಯಾಗಿರುವ ಪೆಲೆಟ್ ಶಾಟ್‌ಗನ್‌ಗಳಿಗೆ ಪರ್ಯಾಯವಾಗಲಿದೆ.

ಈ ಪ್ಲಾಸ್ಟಿಕ್ ಗುಂಡುಗಳು ಕಡಿಮೆ ಮಾರಕ ಎನ್ನುವುದು ಪರೀಕ್ಷೆಗಳಿಂದ ಸಿದ್ಧವಾಗಿದೆ. ಇದರಿಂದಾಗಿ ಗುಂಪುಗಳನ್ನು ನಿಯಂತ್ರಿಸಲು ಪೆಲೆಟ್ ಗನ್‌ಗಳು ಮತ್ತು ಇತರ ಕಡಿಮೆ ಮಾರಕ ಶಸ್ತ್ರಾಸ್ತ್ರಗಳ ಮೇಲಿನ ನಮ್ಮ ಅವಲಂಬನೆಯು ಕಡಿಮೆಯಾಗಲಿದೆ ಎಂದು ಭಟ್ನಾಗರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News