ಮಕ್ಕಳ ಹಸಿವು ಮುಕ್ತ ಕಾರ್ಯದಲ್ಲಿ ಬಾಂಗ್ಲಾ, ನೇಪಾಳಕ್ಕಿಂತ ಹಿಂದುಳಿದ ಭಾರತ!

Update: 2017-10-12 09:21 GMT

ಹೊಸದಿಲ್ಲಿ, ಅ.12: ಒಂದು ಕಡೆ ಪ್ರಧಾನಮಂತ್ರಿ ನರೇಂದ್ರ ಮೋದಿ ನವ ಭಾರತದ ಕನಸು ಕಾಣುತ್ತಿದ್ದರೆ, ಮತ್ತೊಂದೆಡೆ ಭಾರತ ಗಂಭೀರ ಹಸಿವು ಸಮಸ್ಯೆಯತ್ತ ಸಾಗುತ್ತಿದೆ.

ಭಾರತದಲ್ಲಿ ಶೇ.21ರಷ್ಟು ಮಕ್ಕಳು ಎತ್ತರಕ್ಕೆ ತಕ್ಕಷ್ಟು ತೂಕ ಹೊಂದಿಲ್ಲ. ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 2017ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 119 ಅಭಿವೃದ್ದಿಶೀಲ ದೇಶಗಳ ಪೈಕಿ ಭಾರತ 100ನೆ ಸ್ಥಾನದಲ್ಲಿದೆ ಎಂದು ವಾಷಿಂಗ್ಟನ್ ಮೂಲದ ಅಂತಾರಾಷ್ಟ್ರೀಯ ಆಹಾರ ನಿಯಮ ಸಂಶೋಧನಾ ಸಂಸ್ಥೆ ಗುರುವಾರ ಬಹಿರಂಗಪಡಿಸಿದೆ.

ಇತರ ಕೇವಲ ಮೂರು ದೇಶಗಳಾದ ಜಿಬೌಟಿ, ಶ್ರೀಲಂಕಾ ಹಾಗೂ ದಕ್ಷಿಣ ಸೂಡಾನ್‌ನಲ್ಲಿ ಶೇ.20ಕ್ಕಿಂತ ಹೆಚ್ಚಿನ ಪ್ರಮಾಣದ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿವೆ.

100ನೆ ರ್ಯಾಂಕಿನಲ್ಲಿರುವ ಭಾರತ, ಡಿಜಿಬೌಟಿ ಹಾಗೂ ರವಾಂಡ ದೇಶದೊಳಗೆ ಸ್ಥಾನವನ್ನು ಹಂಚಿಕೊಂಡಿದೆ. ಕಳೆದ ವರ್ಷ 97ನೆ ಸ್ಥಾನದಲ್ಲಿದ್ದ ಭಾರತ ಈ ಬಾರಿ 100ನೆ ಜಾಗತಿಕ ಹಸಿವು ಸೂಚ್ಯಂಕ ತಲುಪಿರುವುದು ಗಂಭೀರ ವಿಷಯವಾಗಿದೆ.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ನೆರೆ ರಾಷ್ಟ್ರಗಳಾದ ನೇಪಾಳ(72), ಮೈನ್ಮಾರ್(77), ಬಾಂಗ್ಲಾದೇಶ(88), ಶ್ರೀಲಂಕಾ(84) ಹಾಗೂ ಚೀನಾ(29)ದೇಶಕ್ಕಿಂತ ಕೆಳಗಿದೆ. ಪಾಕಿಸ್ತಾನ 106ನೆ ಸ್ಥಾನದಲ್ಲಿದೆ. ಉತ್ತರ ಕೊರಿಯಾ(93) ಹಾಗೂ ಇರಾಕ್(78) ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News