ಮಾದಕವಸ್ತು ಮಾರಾಟ: ಇಬ್ಬರ ಬಂಧನ

Update: 2017-10-12 13:39 GMT

ಬೆಂಗಳೂರು, ಅ.12: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ 20 ಸಾವಿರ ರೂ. ಮೌಲ್ಯದ 900 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬನಶಂಕರಿಯ 2ನೆ ಹಂತದ ಯಾರಬ್‌ನಗರದ ಸಾಧಿಕ್‌ಪಾಶಾ(27) ಮತ್ತು ಯಾಸೀನ್(19) ಎಂಬವರು ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಯಾರಬ್‌ನಗರದ 9ನೆ ಮುಖ್ಯರಸ್ತೆಯ ಆಟೊ ಗ್ಯಾರೇಜ್‌ನ ಖಾಲಿ ಜಾಗದಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ ಹಿನ್ನಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News