'ತಿಳಿವಳಿಕೆ ಇಲ್ಲದಿರುವುದೇ ಕೀಲುವಾಯು ರೋಗ ಹೆಚ್ಚಲು ಕಾರಣ'

Update: 2017-10-12 16:00 GMT

ಬೆಂಗಳೂರು, ಅ. 12: ಕೀಲುವಾಯು ರೋಗದ ಬಗ್ಗೆ ಸರಿಯಾದ ತಿಳಿವಳಿಕೆ ಮೂಡಿಸದಿರುವುದೇ ರೋಗ ಹೆಚ್ಚಾಗಲು ಕಾರಣ ಎಂದು ಮೂಳೆ ರೋಗ ಶಾಸ್ತ್ರಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೀಲುವಾಯು ರೋಗವು ಆಟೋ ಇಮ್ಯೂನ್ ಕಾಯಿಲೆಯಾಗಿದ್ದು, ಇದರಲ್ಲಿ ಇಮ್ಯುನ್ ತನ್ನ ದೇಹದ ಮೇಲೆ ದಾಳಿ ನಡೆಸುತ್ತದೆ. ಅದು ಆರೋಗ್ಯವಾಗಿರುವ ಸಂಧಿಗಳ ಮೇಲೆ ಪರಿಣಾಮ ಬೀರುತ್ತದೆ. ಸಂಧಿಗೆ ರಕ್ಷಣೆ ನೀಡುವ ಟಿಷ್ಯುಗಳ ಮೇಲೆ ಪರಿಣಾಮ ಬೀರುವುದರಿಂದ ಊತ, ನೋವು ವ್ಯಕ್ತಿಯನ್ನು ಕಾಡುತ್ತದೆ. ಕೆಲವು ವಾರಗಳ ಕಾಲ ನೋವುನಿರಂತರವಾಗಿ ಇದ್ದರೆ ಮತ್ತು ಬೆಳಗಿನ ಸಮಯ 30 ನಿಮಿಷಕ್ಕೂ ಹೆಚ್ಚು ಕಾಲ ಬಿಗಿಯಾಗಿದದರೆ ಅದು ಕೀಲುವಾಯು ಕಾಯಿಲೆಯಾಗಿರುತ್ತದೆ ಎಂದು ಡಾ. ಚೇತನ್ ಅಭಿಪ್ರಾಯಿಸಿದ್ದಾರೆ.

ಕಾಯಿಲೆಯನ್ನು ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚದಿದ್ದರೆ, ಕೈಗಳ ಮೂಳೆ ದುರ್ಬಲವಾಗುತ್ತದೆ. ಬೆಟ್ಟು ಮಡಚುತ್ತದೆ. ಅದರಿಂದಾಗಿ ವಸ್ತುಗಳನ್ನು ತೆಗೆದುಕೊಳ್ಳಲು ಮತ್ತು ಹಿಡಿಯಲು ಆಗುವುದಿಲ್ಲ. ದೇಹದ ಕೆಳಗಿನ ಭಾಗದಲ್ಲಿ ಈ ಕಾಯಿಲೆ ಕಂಡು ಬಂದರೆ ವ್ಯಕ್ತಿ ಹಾಸಿಗೆ ಹಿಡಿಯಬೇಕಾಗುತ್ತದೆ. ಕೀಲುವಾಯು ಕೇವಲ ಸಂಧುಗಳಿಗೆ ಸಂಬಂಧಿಸಿದ ಕಾಯಿಲೆ ಅಲ್ಲ. ದೇಹದ ಇತರ ಅಂಗಾಂಗಗಳಿಗೆ ಹಾನಿ ಮಾಡುತ್ತದೆ ಎಂದು ನಾರಾಯಣ ಹೃದಯಾಲಯ ಹೆಲ್ತ್ ಸಿಟಿಯ ವೈದ್ಯಡಾ.ಅರುಣಾ ಭಟ್ ತಿಳಿಸಿದ್ದಾರೆ.

ಕೀಲುನೋವು ಗುಣಪಡಿಸಲಾಗದ ಕಾಯಿಲೆಯಾದರೂ, ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಮತ್ತು ನಿರ್ಧರಿಸಬಹುದಾಗಿದೆ. ಕೀಲುನೋವಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಔಷಧಿಗಳು ಇವೆ. ಆದರೆ ಕಾಯಿಲೆಯನ್ನು ಕಡೆಗಣಿಸಿದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಚಿಕಿತ್ಸೆ ಪಡೆಯುವುದೂ ಕಷ್ಟಕರ ಆಗುತ್ತದೆ. ಕಷ್ಟದ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಲು ಸರಿಯಾದ ವೇಳೆ ಇದನ್ನು ಗುರುತಿಸಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News