ಜೈಲಿಗೆ ಮರಳಿದ ಶಶಿಕಲಾ

Update: 2017-10-12 16:16 GMT

ಬೆಂಗಳೂರು, ಅ.12: ಅನಾರೋಗ್ಯದಿಂದ ಬಳಲುತ್ತಿರುವ ಪತಿ ನಟರಾಜನ್ ಅವರ ಆರೋಗ್ಯ ವಿಚಾರಿಸಲು ಪೆರೋಲ್ ಮೇಲೆ ಹೊರಗೆ ಹೋಗಿದ್ದ ಎಐಎಡಿಎಂಕೆ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ನಟರಾಜನ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮರಳಿದ್ದಾರೆ.

ಗುರುವಾರ ಸಂಜೆ ವಿ.ಕೆ.ಶಶಿಕಲಾ ವಾಪಸ್ ಆಗಿದ್ದು, ಐದು ದಿನಗಳ ಪೆರೋಲ್ ಪಡೆದು ಅ. 6ರಂದು ಚೆನ್ನೈಗೆ ಹೋಗಿದ್ದರು. ಪತಿ ನಟರಾಜನ್ ಕಿಡ್ನಿ ಹಾಗೂ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಪೆರೋಲ್ ಸಿಕ್ಕಿತ್ತು. ಕೆಲ ಷರತ್ತುಗಳನ್ನು ವಿಧಿಸಲಾಗಿತ್ತು. ಎಲ್ಲವನ್ನೂ ಪಾಲಿಸಿ ಸಂಜೆ 5ಕ್ಕೆ ಕಾರಾಗೃಹಕ್ಕೆ ಬಂದಿದ್ದಾರೆ ಎಂದು ಕಾರಾಗೃಹದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News