ಪೂರ್ವಿಗೆ 'ಲಿಟಲ್ ಮಿಸ್ ವರ್ಲ್ಡ್-2017 ಅವಾರ್ಡ್'

Update: 2017-10-12 16:21 GMT

ಬೆಂಗಳೂರು, ಅ.12: ಗ್ರೀಸ್‌ನಲ್ಲಿ ಇತ್ತೀಚೆಗೆ ನಡೆದ ಲಿಟಲ್ ಮಿಸ್ ವರ್ಲ್ಡ್ 2017 ಅಂತಾರಾಷ್ಟ್ರೀಯ ಸೌಂಧರ್ಯ ಮತ್ತು ಪ್ರತಿಭಾ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಜಿ.ಬಿ.ಪೂರ್ವಿ ಬೆಸ್ಟ್ ಪರ್‌ಫಾರ್ಮನ್ಸ್ ಟ್ಯಾಲೆಂಟ್ ಅವಾರ್ಡ್ ಪಡೆದಿದ್ದಾಳೆ.

ದೀವಾ ಫ್ಯಾಷನ್ ಗ್ರೂಪ್ ಮತ್ತು ಉಕ್ರೇನ್‌ನ ಮಕ್ಕಳ ಕಲೆ ಮತ್ತು ಸಾಂಸ್ಕೃತಿಕ ಉತ್ಸವದ ಸಂಸ್ಥಾಪಕಿ ನತಾಲಿಯಾ 17 ವರ್ಷಗಳಿಂದ ಸೌಂದರ್ಯ ಸ್ಪರ್ಧೆ ನಡೆಸುತ್ತಿದ್ದು, ಈ ಬಾರಿಯ ಒಂದು ವಾರದ ನಡೆದ 18ನೆ ಲಿಟಲ್ ಮಿಸ್ ವರ್ಲ್ಡ್ 2017 ಸ್ಪರ್ಧೆಯಲ್ಲಿ 30 ದೇಶಗಳ 65ಕ್ಕೂ ಅಧಿಕ ಜನರು ಭಾಗವಹಿಸಿದ್ದು, ಆ ಪೈಕಿ 12 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಕರ್ನಾಟಕದ ಪೂರ್ವಿ ಅಪೂರ್ವ ಸಾಧನೆ ಮಾಡಿದ್ದಾಳೆ.

ವಿವಿಧ ದೇಶಗಳ ಹಲವು ತೀರ್ಪುಗಾರರು (ಜ್ಯೂರಿ), ವಸ್ತ್ರ ವಿನ್ಯಾಸಕರು ಸ್ಪರ್ಧಿಗಳ ಆತ್ಮವಿಶ್ವಾಸ, ಪ್ರತಿಭೆ, ಬುದ್ಧಿಮತ್ತೆ, ವಾಕ್ ಚಾತುರ್ಯ, ಸೌಂಧರ್ಯ, ಸಾಮಾಜಿಕ ಚಟುವಟಿಕೆ, ಜನರೊಂದಿಗೆ ಬರೆಯುವ ಮನೋಭಾವ ಇತ್ಯಾದಿ ಗುಣಗಳನ್ನು ಪತ್ತೆ ಹಚ್ಚಿದ್ದು, ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಮಕ್ಕಳು ತೋರಿದ ಪ್ರತಿಭೆಯ ಆಧಾರದ ಮೇಲೆ ತೀರ್ಪುಗಾರರು ಇವರನ್ನು ಆಯ್ಕೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News