ಪೇದೆಗೆ ಡ್ರಾಗರ್ನಿಂದ್ ಇರಿದು ಪರಾರಿಯಾಗಿದ್ದ ರೌಡಿ ಕಾರ್ತಿಕ್ ಸೆರೆ

Update: 2017-10-15 16:25 GMT

ಬೆಂಗಳೂರು,ಅ.15: ಹಲಸೂರು ಬಳಿ ಶನಿವಾರ ತಡರಾತ್ರಿ ತಪಾಸಣೆ ನಡೆಸಲು ಬಂದ ಪೊಲೀಸ್ ಪೇದೆ ಮೇಲೆ ಡ್ರಾಗರ್ನಿಂದ್ ಇರಿದು ಪರಾರಿಯಾಗಿದ್ದ ರೌಡಿ ಕಾರ್ತಿಕ್‌ನ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
 ಬಲಗಾಲಿನ ಮಂಡಿ ಕೆಳಗಿನ ಭಾಗಕ್ಕೆ ಗುಂಡೇಟು ತಗುಲಿ ಗಾಯಗೊಂಡಿರುವ ಕಾರ್ತಿಕ್(28) ಹಾಗೂ ಡ್ರಾಗರ್ನ್ ಇರಿತದಿಂದ ಎಡಗೈಗೆ ಗಾಯಗೊಂಡಿರುವ ಪೇದೆ ಬಸವರಾಜು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 ಕೊಲೆಯತ್ನ, ಸುಲಿಗೆ, ಕಳ್ಳತನ,ಇನ್ನಿತರ 9ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿ ಚಟುವಟಿಕೆಯನ್ನು ಮುಂದುವರೆಸಿದ್ದ ಕಾರ್ತಿಕ್ ತಡರಾತ್ರಿ ವೇಳೆ ದೊಮ್ಮಲೂರು ಕಡೆಯಿಂದ ಬೈಕ್‌ನಲ್ಲಿ ಬರುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಪೇದೆ ಬಸವರಾಜ್ ಬೈಕ್ ಅಡ್ಡಗಟ್ಟಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
  ಆಕ್ರೋಶಗೊಂಡ ಕಾರ್ತಿಕ್ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ರನಲ್ಲಿದ್ದ ಡ್ರ್ಯಾಗರ್ ತೆಗೆದು ಎಡಗೈಗೆ ಚುಚ್ಚಿ ಪಕ್ಕಕ್ಕೆ ತಳ್ಳಿ ಪರಾರಿಯಾಗಿದ್ದಾನೆ ಕೂಡಲೇ ಬಸವರಾಜ್ ಠಾಣೆಗೂ ಅಲ್ಲದೇ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

 ತಕ್ಷಣವೇ ಹಲಸೂರು ಪೊಲೀಸರು ಕಾರ್ಯಚರಣೆ ನಡೆಸಿ ಹಲಸೂರು ಕೆರೆ ಸಮೀಪದ ಗುರುದ್ವಾರದ ಬಳಿ ಗುಂಡು ಹಾರಿಸಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News