ಹಿಮಾಚಲ: 56 ಸ್ಥಾನಗಳ ಕಾಂಗ್ರೆಸ್ ಪಟ್ಟಿ ಪ್ರಕಟ

Update: 2017-10-19 04:21 GMT
ವೀರಭದ್ರ ಸಿಂಗ್

ಶಿಮ್ಲಾ, ಅ. 19: ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್ 9ರಂದು ನಡೆಯುವ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಕೂಡಾ 68 ಸ್ಥಾನಗಳ ಪೈಕಿ 56 ಸ್ಥಾನಗಳಿಗೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಸೋಲನ್ ಜಿಲ್ಲೆಯ ಅರ್ಕಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ರಾಜ್ಯ ಘಟಕದ ಅಧ್ಯಕ್ಷ ಸುಖ್ವಿಂದರ್ ಸಿಂಗ್ ಸುಖು, ಹಮೀರ್‌ಪುರ ಜಿಲ್ಲೆಯ ನಡುವಾನ್ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.

ಉಳಿದಂತೆ ಚುರಾ ಮೀಸಲು ಕ್ಷೇತ್ರದಿಂದ ಸುರೇಂದ್ರ ಭಾರಧ್ವಾಜ್, ಬರ್ಮೋರ್ ಮೀಸಲು ಕ್ಷೇತ್ರದಿಂದ ಠಾಕೂರ್ ಸಿಂಗ್ ಬರ್ಮೋರಿ, ಚಂಬಾದಿಂದ ನೀರಜ್ ನಯ್ಯರ್, ಡಾಲ್‌ಹೌಸಿಯಿಂದ ಆಶಾ ಕುಮಾರಿ, ಭಟಿಯಾತ್‌ನಿಂದ ಕುಲದೀಪ್ ಸಿಂಗ್ ಪಟಾನಿಯಾ, ನೂರ್‌ಪುರದಿಂದ ಅಜಯ್ ಮಹಾಜನ್ ಕಣಕ್ಕೆ ಇಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News