ಎಸ್ಸೈ-ಪಿಎಸ್ಸೈ ನೇಮಕಾತಿ: ಅ.22ಕ್ಕೆ ಲಿಖಿತ ಪರೀಕ್ಷೆ

Update: 2017-10-19 12:41 GMT

ಬೆಂಗಳೂರು, ಅ. 19: ಸಶಸ್ತ್ರ ಮೀಸಲು ಪಡೆ ಸಬ್ ಇನ್ಸ್‌ಪೆಕ್ಟರ್ (ಎಸ್ಸೈ)ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್ಸೈ) ಹಾಗೂ ಸೇವಾನಿರತರನ್ನೊಳಗೊಂಡ ಹುದ್ದೆಗಳ ನೇಮಕಾತಿಗೆ ಅ.22ರಂದು ಬೆಂಗಳೂರು ನಗರದ ಮೂರು ಪರೀಕ್ಷಾ ಕೇಂದ್ರಗಳಲ್ಲಿ 1017 ಮಂದಿ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ.

ಆ ದಿನ ಬೆಳಗ್ಗೆ 10ರಿಂದ 11:30ರ ವರೆಗೆ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ಮಾಹಿತಿ ಇಲಾಖೆ ವೆಬ್‌ಸೈಟ್ www.ksp.gov.inನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಕರಪತ್ರವನ್ನು ಮೇಲ್ಕಂಡ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ವೀಕ್ಷಿಸಲು ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News