ನಕಲಿ ಹೆಚ್ಚುವರಿ ಪೊಲೀಸ್ ಆಯುಕ್ತನ ಬಂಧನ

Update: 2017-10-19 13:13 GMT

ಬೆಂಗಳೂರು, ಅ. 19: ಕೇಂದ್ರ ಸರಕಾರದ ಭದ್ರತಾ ವಿಭಾಗದ ಇ-ಗೌರ್ವನೆನ್ಸ್ ಹೆಚ್ಚುವರಿ ಪೊಲೀಸ್ ಆಯುಕ್ತ ಎಂದು ಹೇಳಿಕೊಂಡು ಪೊಲೀಸ್ ಸಮವಸ್ತ್ರದೊಂದಿಗೆ ದಾಳಿ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಆರೋಪದ ಮೇಲೆ ಎಂಬಿಎ ಪದವೀಧರ ಸೇರಿ ಇಬ್ಬರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ 1ನೆ ಹಂತದ ಇರ್ಫಾನ್ ಪಾಷಾ (30), ಚನ್ನಸಂದ್ರದ ಅರ್ಬಾಝ್ ಖಾನ್ (21) ಬಂಧಿತ ಆರೋಪಿಗಳಾಗಿದ್ದು,ಇವರಿಂದ 3.5 ಲಕ್ಷ ರೂ. ಮೌಲ್ಯದ 5 ಮೊಬೈಲ್‌ಗಳು, 1 ಐ ಪ್ಯಾಡ್ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಆಯುಕ್ತನ ಬಂಧನ: ಎಂಬಿಎ ಪದವೀಧರನಾಗಿದ್ದ ಇರ್ಫಾನ್ ಪಾಷಾ ಪೊಲೀಸ್ ಸೇವೆಗೆ ಸೇರಲು ಸಾಧ್ಯವಾಗದೆ ಈ ಕೃತ್ಯದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಆರೋಪಿಯು ಸ್ವಂತ ಕಚೇರಿ ತೆಗೆದು ಮತ್ತೊಬ್ಬ ಆರೋಪಿಯನ್ನು ಸಹಾಯಕನಾಗಿಟ್ಟುಕೊಂಡು ಪೊಲೀಸ್ ಅಧಿಕಾರಿಗಳ ಸಮವಸ್ತ್ರ ಧರಿಸಿ ನಕಲಿ ಗುರುತಿನ ಚೀಟಿ, ಪಿಸ್ತೂಲ್ ಜೇಬು ಇಟ್ಟುಕೊಂಡು ಖಾಸಗಿ ಕಂಪೆನಿಗಳು ಹಾಗೂ ಶೋ ರೂಂಗಳ ಮೇಲೆ ದಾಳಿ ನಡೆಸುತ್ತಿದ್ದ. ಕೋರಮಂಗಲ 7ನೆ ಬ್ಲಾಕ್‌ನ ಜಸ್ಟ್ ಡಯಲ್ ಕಂಪೆನಿ ಹಾಗೂ ಹೊಸೂರು ರಸ್ತೆಯ ಪರಪ್ಪನ ಅಗ್ರಹಾರದ ಆಡಿ ಶೋರೂಂಗೆ ಆರೋಪಿ ದಾಳಿ ನಡೆಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಈತನ ಬಂಧನದಿಂದ 3 ದಾಳಿ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News