ಬೆಂಗಳೂರು ಸಂಚಾರಿ ಪೊಲೀಸರಿಂದ ಹೊಸ ದಾಖಲೆ!

Update: 2017-10-22 10:22 GMT

ಬೆಂಗಳೂರು, ಅ.22: ಒಂದು ವರ್ಷದಲ್ಲಿ ಬರೋಬ್ಬರಿ ಒಂದು ಕೋಟಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಿಸುವ ಮೂಲಕ ಬೆಂಗಳೂರು ಸಂಚಾರಿ ಪೊಲೀಸರು ಹೊಸ ದಾಖಲೆ ನಿರ್ಮಿಸಿದ್ದಾರೆ.

ನಗರದಲ್ಲಿ ಸೆಪ್ಟೆಂಬರ್ ಅಂತ್ಯದ ವೇಳೆಗೆ 80,93,719 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದವು. ಈಗ ಈ ಸಂಖ್ಯೆ ಒಂದು ಕೋಟಿಗೆ ಏರಿದೆ. ಕಳೆದ ದಶಕದಲ್ಲೇ ಅತ್ಯಧಿಕ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿರುವ ವರ್ಷ ಇದಾಗಿದೆ. ಇವುಗಳಲ್ಲಿ ಅತ್ಯಧಿಕ ಪ್ರಕರಣಗಳು ನೋ ಪಾರ್ಕಿಂಗ್ ಸಂಬಂಧಿಸಿದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರತೀ ನಿಮಿಷಕ್ಕೆ 21 ಸಂಚಾರಿ ನಿಯಮ ಉಲ್ಲಂಘನೆ ಕೇಸುಗಳು ದಾಖಲಾಗುತ್ತವೆ. ಕಳೆದ ಒಂಬತ್ತು ವರ್ಷಗಳಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಪ್ರಕರಣಗಳಲ್ಲೂ ಈ ಬಾರಿ ಹೆಚ್ಚಳವಾಗಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ.

2015ರಲ್ಲಿ ಬೆಂಗಳೂರಿನಲ್ಲಿ 76,26,671 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದರೆ, 2016ರಲ್ಲಿ ಈ ಸಂಖ್ಯೆ 91,80,438 ಆಗಿತ್ತು. ಪ್ರಸ್ತುತ ವರ್ಷ ಇದು ಒಂದು ಕೋಟಿ ಮೀರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News