ರೊಹಿಂಗ್ಯಾ ಸಮಸ್ಯೆ ಬಗೆಹರಿಸಲು ಕಟುನಿಂದೆಗಳ ಬದಲು ವಾಸ್ತವಿಕ ದೃಷ್ಟಿಕೋನ ಅಗತ್ಯ: ಜೈಶಂಕರ್

Update: 2017-10-26 15:00 GMT

ಹೊಸದಿಲ್ಲಿ,ಅ.26: ರೊಹಿಂಗ್ಯಾಗಳನ್ನು ಸ್ವದೇಶಕ್ಕೆ ವಾಪಸಾಗುವಂತೆ ಮಾಡುವುದು ಹೇಗೆ ಎನ್ನುವ ಬಗ್ಗೆ ಭಾರತವು ಗಮನ ಹರಿಸಿದೆ ಎಂದು ಗುರುವಾರ ಇಲ್ಲಿ ಹೇಳಿದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು, ಈ ಬಿಕ್ಕಟ್ಟನ್ನು ಕಟುನಿಂದೆಗಳ ಬದಲು ವಾಸ್ತವಿಕ ದೃಷ್ಟಿಕೋನದ ಮೂಲಕ ಬಗೆಹರಿಸಬೇಕಾಗಿದೆ ಎಂದು ಪ್ರತಿಪಾದಿ ಸಿದರು.

ಬಿಕ್ಕಟ್ಟಿನ ಗಂಭೀರತೆಯ ಬಗ್ಗೆ ಭಾರತವು ಈಗಾಗಲೇ ತನ್ನ ಕಳವಳಗಳ ಬಗ್ಗೆ ಧ್ವನಿಯೆತ್ತಿದೆ ಮತ್ತು ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ಗಳೊಂದಿಗೆ ಉನ್ನತ ಮಟ್ಟದ ಮಾತುಕತೆಗಳನ್ನು ನಡೆಸಿದೆ ಎಂದು ಹೇಳಿದ ಅವರು, ಮ್ಯಾನ್ಮಾರ್‌ನ ರಾಖಿನೆ ರಾಜ್ಯದಿಂದ ಜನರು ಭಾರೀ ಸಂಖ್ಯೆಯಲ್ಲಿ ಬಾಂಗ್ಲಾದೇಶವನ್ನು ಪ್ರವೇಶಿಸುತ್ತಿರುವುದು ಸ್ಪಷ್ಟವಾಗಿ ಕಳವಳದ ವಿಷಯವಾಗಿದೆ. ಅವರು ತಮ್ಮ ಮೂಲಸ್ಥಾನಕ್ಕೆ ಹೇಗೆ ಮರಳಬಹುದು ಎನ್ನುವುದನ್ನು ನೋಡುವುದು ನಮ್ಮ ಲಕ್ಷವಾಗಿದೆ. ಅದು ಸುಲಭವಲ್ಲ ಎಂದರು.

 ಕಾರ್ನಿಗಿ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಜೈಶಂಕರ್, ಅತ್ಯಂತ ಕಠಿಣ ಖಂಡನೆಗಳ ಬದಲು ವ್ಯಾವಹಾರಿಕ ಮಾರ್ಗೋಪಾಯಗಳು ಮತ್ತು ರಚನಾತ್ಮಕ ಮಾತುಕತೆಗಳಿಂದ ಈ ಬಿಕ್ಕಟ್ಟನ್ನು ಸುಧಾರಿಸಬಹುದು ಎಂದು ನಾವು ಭಾವಿಸಿದ್ದೇವೆ. ನಾವು ಹೆಚ್ಚು ಸಮಾಧಾನದ, ವಾಸ್ತವಿಕ ಮತ್ತು ಸ್ಥಳೀಯವಾಗಿ ಸಂವೇದನಾಶೀಲ ನಿಲುವನ್ನು ತಳೆಯುವ ಅಗತ್ಯವಿದೆ ಎಂದು ಹೇಳಿದರು.

ಭಾರತದಲ್ಲಿ ಸುಮಾರು 40,000 ರೊಹಿಂಗ್ಯಾ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News