ಹಾರ್ದಿಕ್ ಪಟೇಲ್ ಗುಂಪಿನ 4 ಬೇಡಿಕೆಗಳ ಈಡೇರಿಕೆಗೆ ಕಾಂಗ್ರೆಸ್ ಅಸ್ತು

Update: 2017-10-31 04:59 GMT

ಅಹ್ಮದಾಬಾದ್ , ಅ.31:  ಗುಜರಾತ್ ನಲ್ಲಿ  ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ  ಹಾರ್ದಿಕ್ ಪಟೇಲ್ ನೇತೃತ್ವದ ಬಲಿಷ್ಠ ಪಟೇಲ್ (ಪಾಟೀದಾರ) ಗುಂಪಿನ   5 ಬೇಡಿಕೆಗಳ ಪೈಕಿ 4 ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದು, ಆದರೆ ಅತ್ಯಂತ ಸಂಕೀರ್ಣವಾದ ಪಾಟೀದಾರ ಸಮುದಾಯಕ್ಕೆ  ಸಾಂವಿಧಾನಿಕ ಮಾನ್ಯತೆ ಹೊಂದಿರುವ ಮೀಸಲಾತಿ ನೀಡುವ ವಿಚಾರವನ್ನು ನಿರ್ಧರಿಸಲು  ಕಾಂಗ್ರೆಸ್ ಮತ್ತು ಹಾರ್ದಿಕ್ ಪಟೇಲ್ ಬಣಗಳ ನಡುವೆ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ.

“ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಾಟೀದಾರ್  ಸಮುದಾಯದ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ದೇಶ ದ್ರೋಹ ಆರೋಪ ಪ್ರಕರಣ ಸೇರಿದಂತೆ ಎಲ್ಲ ಪೊಲೀಸ್ ಕೇಸ್ ಗಳನ್ನು ಹಿಂಪಡೆಯಲು ಕಾಂಗ್ರೆಸ್  ಒಪ್ಪಿಕೊಂಡಿದೆ. ಪಾಟೀದಾರ್ ಸಮುದಾಯದ ಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ(ಎಸ್ ಐಟಿ) ರಚನೆ ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವ  ಬಗ್ಗೆ ಕಾಂಗ್ರೆಸ್ ನಿರ್ಧರ ಕೈಗೊಂಡಿದೆ  ”ಎಂದು ಕಾಂಗ್ರೆಸ್ ನಾಯಕ ಸಿದ್ದಾರ್ಥ ಪಟೇಲ್ ತಿಳಿಸಿದ್ದಾರೆ.

“ಪೊಲೀಸ್ ಗೋಲಿಬಾರ್ ಗೆ ಬಲಿಯಾದ  ಪ್ರತಿಯೊಬ್ಬರ ಕುಟುಂಬಕ್ಕೂ ರೂ 35 ಲಕ್ಷ ರೂ ಪರಿಹಾರವನ್ನು ನೀಡುವ ಮತ್ತು ಮೃತಪಟ್ಟ ವ್ಯಕ್ತಿಯ ಕುಟುಂಬದ ಓರ್ವನಿಗೆ ಸರಕಾರಿ ಉದ್ಯೋಗ ನೀಡುವ ಬೇಡಿಕೆಗೆ ಕಾಂಗ್ರೆಸ್ ಒಪ್ಪಿಗೆ ನೀಡಿದೆ”ಎಂದು ಪಟೇಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News