ಭಾರತೀಯರನ್ನು ಕೊಲ್ಲುತ್ತಿದೆ 'ಮಾಲಿನ್ಯ'

Update: 2017-10-31 07:08 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಅ.31: ವೈದ್ಯಕೀಯ ಜರ್ನಲ್  ಲ್ಯಾನ್ಸೆಟ್ ಇದರಲ್ಲಿ ಪ್ರಕಟವಾದ  ಮಾಹಿತಿಯ ಪ್ರಕಾರ ಭಾರತದಲ್ಲಿ 2015ರಲ್ಲಿ  ವಾಯು ಮಾಲಿನ್ಯಕಾರಕ ಪಿಎಂ 2.5 ಐದು ಲಕ್ಷ ಜನರ ಸಾವಿಗೆ ಕಾರಣವಾಗಿದೆ. ಪ್ರಥಮ ಬಾರಿಗೆ ವರದಿಯು ಪ್ರತಿಯೊಂದು ಮಾಲಿನ್ಯಕಾರಕದಿಂದ ಉಂಟಾದ ಸಾವಿನ ಪ್ರಮಾಣದ ಬಗ್ಗೆ  ಮಾಹಿತಿ ನೀಡಿದೆ.

ಮನೆಗಳಲ್ಲಿ ಅಡುಗೆ ಮಾಡಲು ಉಪಯೋಗಿಸುವ ಕಟ್ಟಿಗೆಯಿಂದ ಹೊರಸೂಸುವ ವಿಷಕಾರಿ ಗಾಳಿಯಿಂದಾಗಿ  2015ರಲ್ಲಿ ದೇಶದಲ್ಲಿ 1,24,207 ಮಂದಿ ಅವಧಿಪೂರ್ವ ಮರಣವನ್ನಪ್ಪಿದ್ದಾರೆಂದು ವರದಿ ಹೇಳಿದೆ.

ಮಾನವ ಕೂದಲಿನ ಅಗಲಕ್ಕಿಂತಲೂ 30 ಪಟ್ಟು ಸಣ್ಣದಾಗಿರುವ ಈಪಿಎಂ2.5 ಎಂಬ ಮಾಲಿನ್ಯಕಾರಕ ಮಾನವ ದೇಹಕ್ಕೆ ಅಪಾಯಕಾರಿಯಾಗಿದೆ. ಪಿಎಂ10 ಗಂಟಲಲ್ಲಿ ಸಿಲುಕಿಕೊಂಡರೆ, ಪಿಎಂ2.5  ಗಂಟಲನ್ನು ದಾಟಿ ಶ್ವಾಸಕೋಶ ಹಾಗೂ ರಕ್ತನಾಳಗಳನ್ನು ಪ್ರವೇಶಿಸುತ್ತವೆ.

ಪಿಎಂ2.5 ಮಾಲಿನ್ಯಕಾರಕವನ್ನು ಹೊರಸೂಸುವ ಫ್ಯಾಕ್ಟರಿಗಳು, ಕಲ್ಲಿದ್ದಲು ಆಧರಿತ ವಿದ್ಯುತ್ ಘಟಕಗಳು ಮತ್ತು ಸಾರಿಗೆ ವಾಹನಗಳು ಕೂಡ 2015ರಲ್ಲಿ ಅತಿ ಹೆಚ್ಚು ಭಾರತೀಯರ ಸಾವಿಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ವರದಿಯ ಪ್ರಕಾರ 1980ರಿಂದೀಚೆಗೆ ಭಾರತ ತನ್ನ ವಿದ್ಯುತ್ ಉತ್ಪಾದನೆಯನ್ನು ತ್ರಿಗುಣಗೊಳಿಸಿದ್ದು ಈ ಅವಧಿಯಲ್ಲಿ  ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಉಪಯೋಗಿಸುವ ಪ್ರಮಾಣ ಶೇ. 22ರಿಂದ ಶೇ. 44ಕ್ಕೆ ಏರಿದೆ.

ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ವೂ ದೇಶದಲ್ಲಿ ಗಣನೀಯವಾಗಿ ಏರಿದೆ ಎಂದು ಲ್ಯಾನ್ಸೆಟ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News