ಅನಿರ್ವಚನೀಯ ಚಿಟ್ಟಾಣಿ

Update: 2017-11-09 05:39 GMT

ಯಕ್ಷಗಾನ ಕ್ಷೇತ್ರದ ಹಾಗೆಯೆ ಭಾರತೀಯ ಸಾಂಪ್ರದಾಯಿಕ ರಂಗಭೂಮಿಯ ವಿಚಿತ್ರ ಪ್ರತಿಭೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಎಂಬತ್ತನಾಲ್ಕರ ಪೂರ್ಣಾಯುಷ್ಯದಲ್ಲಿ ಅಗಲಿದ್ದಾರೆ. ತನ್ನ ಜೀವನ, ಅಭಿವ್ಯಕ್ತಿ ವಿಧಾನ - ವ್ಯಕ್ತಿತ್ವಗಳಿಂದ ಹಲವು ಆಶ್ಚರ್ಯಗಳನ್ನು, ಪ್ರಶ್ನೆಗಳನ್ನು, ಪ್ರಭಾವಗಳನ್ನು ಉಳಿಸಿದ್ದಾರೆ. ಸುಲಭದ ವಿವರಣೆಗೆ ಸಿಗದ, ಪ್ರತ್ಯೇಕತೆಯ ಲಕ್ಷಣಗಳ ಸಾಧಕರನ್ನು ‘ಶ್ರೇಷ್ಠ’ರೆಂದು ಪರಿಗಣಿಸುವುದೊಂದು ರೂಢಿ. ಈ ಗಣನೆಯಲ್ಲಿ ಚಿಟ್ಟಾಣಿ ಓರ್ವ ಅನಿರ್ವಚನೀಯ ಎಂದರೆ ಸರಳ ವಿಭಾಗೀಕರಣಕ್ಕೆ ದಕ್ಕದ ಕಲಾಕಾರ - ಕಲೆ, ಬದುಕು, ಸಾಧನೆ ಎಲ್ಲದರಲ್ಲೂ ಅನೇಕ ಮಜಲುಗಳಲ್ಲಿ ವಿಶಿಷ್ಟರೆನಿಸಿ, ಬದುಕಿನಲ್ಲೂ, ಮರಣದಲ್ಲೂ ದೊಡ್ಡ ಗೌರವ ಪಡೆದವರು. (ಹುಟ್ಟು 1933/ ತಂದೆ: ಈಶ್ವರ ಹೆಗಡೆ, ತಾಯಿ: ಗಣಪಿ ಹೆಗಡೆ, ಪತ್ನಿ: ಸುಶೀಲಾ.)

    (ಚಿಟ್ಟಾಣಿ ರಾಮಚಂದ್ರ ಹೆಗಡೆ)

ಅನಕ್ಷರ ವಿದ್ವಾಂಸ:

ಮಹಾಕವಿ ಮಂದಾರ ಕೇಶವ ಭಟ್ಟರ ಕಾವ್ಯದಲ್ಲೊಂದು ಮಾತು; ‘‘ಹಳ್ಳಿಯ ಓದುಬರಹ ತಿಳಿಯದ ಶ್ರೇಷ್ಠ ವಿದ್ವಾಂಸರು’’ ಎಂಬುದು. ಚಿಟ್ಟಾಣಿ ಅದಕ್ಕೆ ಜೀವಂತ ದೃಷ್ಟಾಂತದಂತಿದ್ದಾರೆ. ಎರಡನೇ ಕ್ಲಾಸಿನಲ್ಲಿ ಶಾಲೆ ಬಿಟ್ಟು, ಗುಡ್ಡೆಯಲ್ಲಿ ಅಡಗಿ, ಆಟಕ್ಕೆ ಸೇರಿದ ಇವರಿಗೆ ದಸ್ಕತು ಹಾಕಲೂ ಕಡುಕಷ್ಟ. ಇಂತಹ ಚಿಟ್ಟಾಣಿಯ ಮಾಣಿ, ಉನ್ನತವಾದ ಮಾನ್ಯತೆ ‘ಪದ್ಮಶ್ರೀ’ ಗಳಿಸಿದ್ದು ಗುಡ್ಡೆ ಕೇರಿಗೆ, ಜಾನಪದ ಜನಪದಕ್ಕೆ ಸಂದ ಗೌರವ, ನಿರಕ್ಷರರಿಗೆ ಆತ್ಮ ವಿಶ್ವಾಸ ನೀಡುವ ಸಂಗತಿ. ‘ಅ-ದೃಷ್ಟ’ ಪವಾಡ. ಆರಂಭದಲ್ಲಿ ಕೆಲವುದಿನ ಬಾಳೆಗದ್ದೆ ರಾಮಕೃಷ್ಣ ಭಟ್ಟರಿಂದ ಹೆಜ್ಜೆ ಕಲಿತದ್ದು ಮಾತ್ರ, ಉಳಿದದ್ದೆಲ್ಲ ಸ್ವಾಧ್ಯಾಯ. ನೋಡಿ- ಕೇಳಿ - ಕಲೆತು- ಕುಣಿದ ಕಲೆಯ ಕಲಿಕೆ. ‘ಎಂತು ಬಣ್ಣಿಪೆನೀ ವಿಚಿತ್ರವನು?’ ಎಂಬಂತಹ ಪ್ರಸಂಗ ಅದು. ಕೊನೆವರಗೂ ಸ್ವಭಾವ, ವರ್ತನೆ ಕಲೆಗಳಲ್ಲಿ ಚಿಟ್ಟಾಣಿ ಜಾನಪದರೇ ಆಗಿದ್ದ ‘ಹಳ್ಳಿಗ-ಸಾಧಕ’. ಹೊಸ ಪ್ರಸಂಗದ ಪದ್ಯಗಳನ್ನು ಅವರಿಗೆ ಯಾರಾದರೂ ಓದಿ ಹೇಳಬೇಕಿತ್ತು. ಅವರ ಕುರಿತಾದ ಲೇಖನ ಬಂದರೂ ಹಾಗೆಯೆ...

ಉದ್ಭವ ಕಲಾವಿದ:

ಹಿರಿಯ ಕಲಾವಿದರನ್ನು ಸೂತ್ರಪ್ರಾಯವಾಗಿ ಹೇಳುವಾಗ ನಟವರ (ಶಿವರಾಮ ಹೆಗ್ಡೆ), ಯಕ್ಷ ಮಹಾಬಲ (ಮಹಾಬಲ ಹೆಗ್ಡೆ), ಕ್ರಾಂತಿಕಾರಿ ಯಕ್ಷ ವಿಶ್ವಾಮಿತ್ರ (ಶೇಣಿ), ಪಾಂಡಿತ್ಯ ಪ್ರಭು (ದೊಡ್ಡ ಸಾಮಗರು) ಆಚಾರ್ಯ (ಕುರಿಯಶಾಸ್ತ್ರಿ), ಸಂಪ್ರದಾಯ ಕಲಾವಿದ (ಗುರು ವೀರಭದ್ರ, ಹಾರಾಡಿ ರಾಮ), ದಂತಕತೆ (ಬಲಿಪ ಭಾಗವತರು) ಪ್ರಜ್ಞಾವಂತ ಕಲಾವಿದ (ಶಂಭು ಹೆಗ್ಡೆ) -ಹೀಗೆಲ್ಲ ಕರೆಯುತ್ತೇವೆ. ಚಿಟ್ಟಾಣಿ ಬಗೆಗೆ ಏನು ಹೇಳೋಣ? ಹಾಗಾಗಿ ಅವರನ್ನು ‘ಉದ್ಭವ ಕಲಾವಿದ’ ಅನ್ನಬಹುದು. ಪಕ್ಕನೆ ಕಾಣಿಸಿ, ತನ್ನದೆ ರೀತಿಯಲ್ಲಿ ಬೆಳೆದು ಬೆಳಗಿ ‘ರೈಸಿದ’ ವಿಚಿತ್ರ ಪ್ರತಿಭೆ ಅದು. ಅವರ ಕಲಿಕೆ, ಯಶಸ್ಸು, ಜನಪ್ರಿಯತೆ ಎಲ್ಲವೂ ಬೇರೆ ತರಹ. ದೂಸ್ರಾ.

ಭಸ್ಮಾಸುರನ, ಕೃಷ್ಣನ ಪ್ರವೇಶದ ಹಾಗೆ-ಮಿಂಚಿದ ಪಾತ್ರ-ಧಾರಿ.

ಯೋಗ-ಯೋಗ್ಯತೆ:

ಓರ್ವನು ಯಶಸ್ವಿ ಆಗಬೇಕಾದರೆ ಯೋಗ್ಯತೆ ಬೇಕು. ಅಷ್ಟೆ ಸಾಲದು - ಯೋಗ ಬೇಕು, ಆಯುಷ್ಯವೂ ಬೇಕು. ಈ ಮೂರನ್ನೂ ಸಮೃದ್ಧವಾಗಿ ಪಡೆದವರು ಚಿಟ್ಟಾಣಿ. ಎಲ್ಲ ಹಂತದಲ್ಲೂ ಹೌದು. ಇಲ್ಲದೇ ಹೋದ ‘ವಿದ್ಯಾಭ್ಯಾಸ ಯೋಗ’ ಉಳಿದುದರಲ್ಲಿ ಕೂಡಿ ಬಂದಿತು.

ಹೊನ್ನಾವರದ ಚ್ಟಿಟ್ಟಾಣಿ (ನಿಜಕ್ಕಾದರೆ ಚಿಟಾಣಿ) ಸುತ್ತ ಮುತ್ತ ಮಹಾನ್ ಕಲಾ ಪರಂಪರೆಯ ಸಮೃದ್ಧಿ . ಕರ್ಕಿ ಮೇಳ, (ಹಾಸ್ಯಗಾರ ಮನೆತನ) ಕೆರೆಮನೆ ಶಿವರಾಮ ಹೆಗ್ಡೆ, ದೇವರು ಹೆಗ್ಡೆ, ನರ್ತನ ಶ್ರೇಷ್ಠ ಮೂಡ್ಕಣಿ ನಾರಾಯಣ ಹೆಗ್ಡೆ, ಎಲ್ಲರನ್ನು ನೋಡುವ ಅವಕಾಶ. ಪಿ.ವಿ. ಹಾಸ್ಯಗಾರ, ಏಕ್ಟರ್ ಜೋಶಿ, ಮಹಾಬಲ ಹೆಗ್ಡೆ ಹಿರಿಯ ಓರಗೆಯವರು. ಇದೆಲ್ಲ ಸಮೃದ್ಧ ಜೀವಂತ ಸಹಯೋಗ ಭಾಗ್ಯ. ಶಿವರಾಮ ಹೆಗ್ಡೆಗೆ ಚಿಟ್ಟಾಣಿ ಏಕಲವ್ಯ. ತನ್ನ ಗುರು ಅವರೆಂದೇ ಘೋಷಣೆ. ಶಿವರಾಮ ಹೆಗ್ಡೆ ಪ್ರಶಸ್ತಿ ತಾನು ಪಡೆದ ಅತೀ ಶ್ರೇಷ್ಠ ಸಂಮಾನವೆಂದು ಆರ್ದ್ರ ಧನ್ಯತೆ.

ಚಿಕ್ಕಂದಿನಲ್ಲೇ ಆ ಪ್ರದೇಶದ ಇನ್ನೋರ್ವ ವಿಚಿತ್ರ ಪ್ರತಿಭಾಶಾಲಿ ಕಡತೋಕಾ ಮಂಜುನಾಥ ಭಾಗವತರ ಸಹವಾಸವು ಕಲಾ ಜೀವನಕ್ಕೆ ದೊಡ್ಡ ನೆಗೆತ ನೀಡಿತು. ಕಾಳಿದಾಸ ಪ್ರಸಂಗದ ಕಲಾಧರ ಮೊದಲ ದೊಡ್ಡ ವೇಷ. ಆ ಬಳಿಕ ಕೃಷ್ಣ, ಭಸ್ಮಾಸುರ, ಕೌರವ-ಹೀಗೆ.

‘ಮಂಜು ಭಾಗವತರ ಭಾಗವತಿಕೆ ನನಗೆ ದೊರೆತ ನಿಧಿ’ ಇದು ಅವರ ಮಾತು. ಮುಂದೆ ಕೃಷ್ಣ ಭಾಗವತ, ಪ್ರಾಚಾರ್ಯ ಉಪ್ಪೂರು, ಧಾರೇಶ್ವವರರಿಂದ ಕಲಾ ಜೀವನಕ್ಕೆ ದೊಡ್ಡ ಬೆಂಬಲ. ಹಲವು ಕಿರಿಯರ ಜೊತೆಗೂ ಒಳ್ಳೆಯ ಜತೆಗಾರಿಕೆ. ಹಂತ ಹಂತವಾಗಿ ಜನಪ್ರಿಯತೆಯ ಔನ್ನತ್ಯಕ್ಕೆ ಏರುತ್ತಾ ಮೂರು ತಲೆಮಾರಿನ ಜತೆ ರಂಗ ವ್ಯವಸಾಯ.

ಹೆಚ್ಚು ವಿದ್ಯಾವಂತರಾದ, ವ್ಯವಸ್ಥಿತ ಕಲಿಕೆಯ ಅನೇಕ ಕಲಾವಿದರ ಮಧ್ಯೆಯೂ ಪ್ರಸ್ತುತರಾಗಿ ತನ್ನದಾದ ಬೇರೆಯೇ ಸ್ಥಾನ ನಿರ್ಮಿಸಿಕೊಂಡು. ಏಳು ದಶಕಗಳ ಕಾಲ ಓರ್ವ ಪ್ರಮುಖ ಕಲಾವಿದ, ಚ್ಜಟ್ಟ ಅ್ಚಠಿಟ್ಟ ಆಗಿ ಮೆರೆದ ಚಿಟ್ಟಾಣಿ, ಟೀಕಾಕಾರರು ಕಡೆಗಣಿಸಲಾಗದ, ಒಂದು ಬಗೆಯಿಂದ ‘ಎಲ್ಲರ ಮೆಚ್ಚುಗೆ’ ಪಡೆದ ಅದೃಷ್ಟಶಾಲಿ.

ಜನಪ್ರಿಯತೆ, ಗಳಿಕೆ, ಅಭಿಮಾನಿ ವರ್ಗ ಪ್ರಶಸ್ತಿಗಳು, ಕೊನೆಗೆ ಅಂತಿಮ ಯಾತ್ರೆಯಲ್ಲೂ ಭವ್ಯ ಗೌರವ - ಎಲ್ಲ ವಿರಳ ಪ್ರಾಪ್ತಿಗಳು. ವಿವಾದದಲ್ಲೂ ಪ್ರಭಾವಿ!

ಚಿಟ್ಟಾಣಿ ಕುಣಿತ :

ಚಿಟ್ಟಾಣಿ ಕುಣಿತವೂ ವಿಶಿಷ್ಟ. ಅದು ಪಾರಂಪರಿಕ ನೃತ್ಯವನ್ನು ಒಂದಿಷ್ಟು ಮೀರಿ, ಬಗ್ಗಿಸಿ ತಯಾರಾದ ಅವರದೇ ಶೈಲಿ. ಅವರಿಗೆ ದೊಡ್ಡ ಹೆಸರು ತಂದಿಠ್ಛಿಠಿ ಭಸ್ಮಾಸುರನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ನೃತ್ಯ ವಿಧಾನವಾಗಿತ್ತದು. ಅವರ ನರ್ತನಕ್ಕೆ ‘ಭಸ್ಮಾಸುರ ನಾಟ್ಯ’ವೆಂದು ಒಂದು ಕಾಲದಲ್ಲಿ ಹೆಸರಾಗಿತ್ತು. ಆ ಪಾತ್ರದ ವಿಶಿಷ್ಟ ರೂಪವನ್ನು ಕಾಣಿಸುವ ಪ್ರವೇಶದ ಅಬ್ಬರ, ವಿವಿಧ ಭಂಗಿಗಳು ಆ ಪಾತ್ರವನ್ನು ಕಡೆದಿಟ್ಟಿದ್ದವು. ಅವರು ಆ ಪಾತ್ರದ ತಯಾರಿಗಾಗಿ ಕುರಿಯ ವಿಠಲ ಶಾಸ್ತ್ರಿಗಳ ಭಸ್ಮಾಸುರನನ್ನು ಐದು ಬಾರಿ ನೋಡಿ ಹೋಗಿದ್ದರಂತೆ! ಆದರೂ, ಶಾಸ್ತ್ರಿಗಳ ನೃತ್ಯ ನಾಜೂಕು, ಚಿಟ್ಟಾಣಿಯವರದು ದೊರಗು. ಎರಡೂ ಒಂದೊಂದು ರೀತಿಯಲ್ಲಿ ಚಂದವೇ.

ಚಿಟ್ಟಾಣಿಯವರ ಪ್ರವೇಶ ನೃತ್ಯ, ಹಸ್ತಾಭಿನಯ, ಶಬ್ದಾಭಿನಯ, ಚಿತ್ರಾಭಿನಯ ಎಲ್ಲವೂ ತುಸು ವಿಭಿನ್ನ, ಪರಿಣಾಮಕಾರಿ. ಕೀಚಕ, ಕಂಸ, ರುದ್ರಕೋಪ, ಮಾಗಧ, ಕೃಷ್ಣ, ಅರ್ಜುನ, ದುರ್ಯೋಧನ, ಕಂಸ, ಬಲರಾಮ ಮತ್ತು ಆಧುನಿಕ ಪ್ರಸಂಗಗಳ ಅನೇಕ ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುವಲ್ಲಿ ಅವರ ವಿಸ್ತಾರವಾದ ಹರಹು, ರೇಂಜ್ ಕಾಣುತ್ತಿತ್ತು. ಆದರೆ ಅವರ ಶೃಂಗಾರ ಸನ್ನಿವೇಶಗಳ ಕಪ್ಪೆ ಕುಣಿತ, ಬಾಯಿ ನೀರು ಸುರಿಸುವ ದೃಶ್ಯ, ಕೆಲವು ವಿಚಿತ್ರ ಮೈಕುಲುಕಾಟಗಳು ಈ ಕಲೆಯ ಗಾಂಭೀರ್ಯ, ಔಚಿತ್ಯಗಳಿಗೆ ವಿರುದ್ಧವಾಗಿದ್ದುದು ಸತ್ಯ.

ಅವರ ರಂಗ ಉಪಸ್ಥಿತಿ, ರಂಗ ಪರಿಣಾಮ, ಇಡಿಯ ಪ್ರದರ್ಶನದಲ್ಲಿ ಪ್ರಭಾವಿ ಅಸ್ತಿತ್ವ, ಇಡೀ ಪ್ರೇಕ್ಷಕ ವರ್ಗವನ್ನು ಆಕರ್ಷಿಸುವ ಸೆಳೆತ - ಇವೆಲ್ಲ ಅದ್ಬುತ. ಜತೆಗೆ ಮೌಲಿಕ ಕೊರತೆಗಳೂ, ಅಸೌಚಿತ್ಯಗಳೂ ಸೇರಿಕೊಂಡೇ ಇದ್ದುವು. ತನ್ನ ನಿವಾಸವನ್ನು ಚಿಟ್ಟಾಣಿಯಿಂದ ಅಗುಡೇಕೇರಿಗೆ ಬದಲಿಸಿದಾಗ ಚಿಟ್ಟಾಣಿ ಹೇಳಿದರಂತೆ ‘ಮಹಾನ್ ನರ್ತಕ ಮೂಡ್ಕಣಿಯವರ ಮನೆ ಇಲ್ಲೆ ಹತ್ತಿರ ಇದ್ದದ್ದು, ಹಾಗಾಗಿ ಇನ್ನಾದರೂ ನನ್ನ ಕುಣಿತ ಸರಿಯಾದೀತೇನೋ’?!

ಚಿಟ್ಟಾಣಿ ಅವರ ಒಟ್ಟು ಅಭಿವ್ಯಕ್ತಿ ವಿಧಾನ ಉತ್ತರ ಕನ್ನಡದ ಶೈಲಿ, ಸ್ವಂತ ಕಲ್ಪನೆ ಮತ್ತು ಲೋಕಧರ್ಮಿಯ ವಿಚಿತ್ರ ಮಿಶ್ರಣವಾಗಿತ್ತು.

ಕಡತೋಕಾ ಭಾಗವತರ ಮಾತಿನಲ್ಲಿ ‘ಶಿವರಾಮ ಹೆಗಡೆಯವರ ಅಭಿನಯವು ಪ್ರವಾಹದಂತೆ, ಶಂಭು ಹೆಗ್ಡೆಯದು ತರಂಗದಂತೆ, ಚಿಟ್ಟಾಣಿಯವರದು ಮುದ್ದೆ ರಾಶಿಗಳಂತೆ!’

ಎಲುಬಿಲ್ಲದ ಮೈ, ದಣಿವಿಲ್ಲದ ದುಡಿಮೆ:

ಚಿಟ್ಟಾಣಿ ಅವರ ಬಾಗು ಬಳಕು ವಿನ್ಯಾಸ ಕುಣಿತ ಮಣಿತ ಕಂಡು ಹುಟ್ಟಿದ ಮಾತು - ‘‘ಅವರ ಮೈಯಲ್ಲಿ ಎಲುಬಿಲ್ಲ’’, ಎಷ್ಟು, ಹೇಗೆ ಬೇಕಿದ್ದರೂ ಅದು ಬಗ್ಗುತ್ತಿತ್ತು. ಎಂಬತ್ತರ ಹರೆಯದಲ್ಲೂ ಬಿದ್ದು, ಎದ್ದು, ಕುಳಿತು, ಹಾರಿ, ಚಲಿಸುವ ಸಲೀಸು ಅಸಾಧಾರಣ ಪ್ರಾವೀಣ್ಯ. ಕಸುಬು ಕಠಿಣವಾಗಿದ್ದ ಕಾಲದಿಂದ (1947) ಇಂದಿನ ತನಕ ವ್ಯಾವಸಾಯಿಕ ವಿವಿಧ ಮಜಲುಗಳಲ್ಲಿ ಮೆರೆದ ಚಿಟ್ಟಾಣಿ ಎಪ್ಪತ್ತು ವರ್ಷ ರಂಗನಾಯಕ. ನಿಗಿನಿಗಿ ಜೀವಂತಿಕೆಯ ಮೂರ್ತಿ ಏಕ ಪ್ರಕಾರ ಜನಪ್ರಿಯ.

ದೀರ್ಘವಾದ ಕುಣಿತದ ಪದ್ಯಗಳಿದ್ದರೆ ಹೆಚ್ಚಿನ ನಟರಿಗೆ ಆ ಬಳಿಕ ಮಾತಾಡುವಾಗ ಏದುಸಿರು ಬಿಡುವುದು ಸಹಜ. ಚಿಟ್ಟಾಣಿ ಇಪ್ಪತ್ತು ನಿಮಿಷ ಒಂದು ಪದ್ಯಕ್ಕೆ ಕುಣಿದು ಮಾತಾಡಿದಾಗಲೂ ‘ಸೇಕಿದ್ದು’ ಕಾಣೆ! ಈ ನಿರಾಯಾಸ ಅನಾಯಾಸ ರೀತಿಗಳಲ್ಲಿ ಅವರು ಕೆ. ಗೋವಿಂದ ಭಟ್ಟರ ಹಾಗೆ.

ವಿಚಿತ್ರ ವಾಚಿಕ:

ಚಿಟ್ಟಾಣಿ ಅರ್ಥಗಾರಿಕೆ ದುರ್ಬಲ. ಕೆಲವೇ ಮಾತು, ಸಾಹಿತ್ಯವು ಸಾಮಾನ್ಯ. ಆದರೆ ಅದಕ್ಕೇನೋ ಒಂದು ಶಕ್ತಿ ಇತ್ತು. ಎಲ್ಲ ಬಗೆಯ ಪಾತ್ರಗಳಿಗೆ ಹೊಂದುವ ವಿಚಿತ್ರವಾದ ದೊಡ್ಡ ವಾಲ್ಯೂಮ್ ಇಲ್ಲದೆಯೂ ತೀಕ್ಷ್ಣತೆ ಇದ್ದ ದನಿ, ಚಿಕ್ಕ ಚಿಕ್ಕ ವಾಕ್ಯ, ಸಂಗೀತಾತ್ಮಕವಾದ ಸ್ವರ ಎಂಥ ವಿಲಕ್ಷಣ ಸ್ವರ ಅದು. ಅವರ ಹಾಗೆಯೆ. - ಇವುಗಳಿಂದ ಅವರ ಮಾತು ಅಭಿವ್ಯಕ್ತಿಗೆ ಎರಕವಾಗಿ , ಪಾತ್ರದ ಭಾಗವಾಗಿ ಕಾಣುತ್ತಿತ್ತು. ಇದು ವಿವರಣೆ ಮೀರಿದ ಅವರಿಗೇ ಸೀಮಿತವಾದ ಒಂದು ರೀತಿ.

ಚಿಟ್ಟಾಣಿಯವರ ಪ್ರವೇಶ ನೃತ್ಯ, ಹಸ್ತಾಭಿನಯ, ಶಬ್ದಾಭಿನಯ, ಚಿತ್ರಾಭಿನಯ ಎಲ್ಲವೂ ತುಸು ವಿಭಿನ್ನ, ಪರಿಣಾಮಕಾರಿ. ಕೀಚಕ, ಕಂಸ, ರುದ್ರಕೋಪ, ಮಾಗಧ, ಕೃಷ್ಣ, ಅರ್ಜುನ, ದುರ್ಯೋಧನ, ಕಂಸ, ಬಲರಾಮ ಮತ್ತು ಆಧುನಿಕ ಪ್ರಸಂಗಗಳ ಅನೇಕ ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುವಲ್ಲಿ ಅವರ ವಿಸ್ತಾರವಾದ ಹರಹು, ರೇಂಜ್ ಕಾಣುತ್ತಿತ್ತು. ಆದರೆ ಅವರ ಶೃಂಗಾರ ಸನ್ನಿವೇಶಗಳ ಕಪ್ಪೆ ಕುಣಿತ, ಬಾಯಿ ನೀರು ಸುರಿಸುವ ದೃಶ್ಯ, ಕೆಲವು ವಿಚಿತ್ರ ಮೈಕುಲುಕಾಟಗಳು ಈ ಕಲೆಯ ಗಾಂಭೀರ್ಯ, ಔಚಿತ್ಯಗಳಿಗೆ ವಿರುದ್ಧವಾಗಿದ್ದುದು ಸತ್ಯ.

ಕೌರವ ಒಂದು ಅನುಭವ:

1968ರ ಸುಮಾರಿಗೆ ಹಳದೀಪುರದಲ್ಲಿ ಒಂದು ಗದಾಪರ್ವ. ಚಿಟ್ಟಾಣಿ ಕೌರವ, ಜಳವಳ್ಳಿ ಭೀಮ. ನಾನು ‘ಮಾತಿನ ವೇಷಧಾರಿ’ ಎಂದು ಆಹ್ವಾನಿತನಾಗಿದ್ದೆ! ಕೃಷ್ಣನಾಗಿದ್ದೆ. ಅಂದು ಉತ್ತರ ಕನ್ನಡ ಶೈಲಿಯ ಗದಾ ಪರ್ವದ ವಿಶ್ವರೂಪವನ್ನು ರಂಗದಲ್ಲೇ ಹತ್ತಿರದಿಂದ ನೋಡುವ ಸೌಭಾಗ್ಯ ನನ್ನದಾಯಿತು.ಇದು ನನ್ನ ಅವಿಸ್ಮರಣೀಯವಾದೊಂದು ವೀಕ್ಷಣೆಯಾಗಿ ಉಳಿದಿದೆ. ಅವರಿಬ್ಬರ ಭೀಮ ಕೌರವ ಅಸಾಧಾರಣಾವಾಗಿತ್ತು. ಚಿಟ್ಟಾಣಿ (ಆಗ ಅವರಿಗೆ ಮುವತ್ತನಾಲ್ಕರ ಹರೆಯ) ದುರ್ಯೋಧನನನ್ನು ಕಾಣಿಸಿದ ಪರಿ -ಅಚ್ಚೊತ್ತಿ ನಿಂತಿದೆ ಆ ಬಳಿಕವೂ ನೂರಾರು ಬಾರಿ ಅವರದನ್ನು ನಿರ್ವಹಿಸಿದ್ದಾರೆ. ಅದು ಶಿವರಾಮ ಹೆಗಡೆ ಅವರ ನೇರ ಅನುಕರಣೆಯಂತೆ. ವಿಶೇಷವೆಂದರೆ ಚಿಟ್ಟಾಣಿ ಅವರ ಅನೇಕ ವಿಕ್ಷಿಪ್ತ, ವಿಕಾರಗಳೆಲ್ಲ ಅದರಲ್ಲಿರಲಿಲ್ಲ. ಅದು ತನ್ನ ಮಾದರಿಗೆ ನಿಷ್ಠವಾಗಿತ್ತು.ಈ ವಿಚಾರವೂ ಸೂಚಕವಾಗಿದೆಯಷ್ಟೆ? ಅವರ ಪಾತ್ರಗಳ ಪರಿಕಲ್ಪನೆ, ಡಿಸೈನ್‌ಗಳು ವಿಲಕ್ಷಣ, ಪರಿಣಾಮಕಾರಿ.

ಚಿಟ್ಟಾಣಿ - ಜಲವಳ್ಳಿ:

ಜಲವಳ್ಳಿ ವೆಂಕಟೇಶರಾವ್ -ಉತರಕನ್ನಡ ಯಕ್ಷಗಾನದ ಇನ್ನೊಂದು ‘ಅನಕ್ಷರ ಮಹಾಪ್ರತಿಭೆ!’. ಜಲವಳ್ಳ -ಚಿಟ್ಟಾಣಿ ಜೋಡಿ ವಿಶಿಷ್ಟ! ಜಲವಳ್ಳಿ ನೃತ್ಯಪ್ರವೀಣನಲ್ಲ. ಹಾಸು ಬೀಸು, ಝಾಪು, ಅಭಿನಯ, ಪರಿಣಾಮಕಾರಿ ಮಾತು, ಚೊಕ್ಕ ತೀವ್ರ ಆದರೂ ಚಿಟ್ಟಾಣಿ ಇದಿರು ಸ್ಥಾಪಿತರಾದರು. ಇವರಿಬ್ಬರೂ ರಂಗದಲ್ಲಿ ಬಹುಕಾಲ ಎದುರಾಳಿಗಳಾಗಿ ಮೆರೆದು ದೊಡ್ಡ ಆಕರ್ಷಣೆಯಾಗಿದ್ದರು. ವ್ಯವಸಾಯ ಪ್ರವಾಹದಲ್ಲಿ ಬೇರೆ ಆದರು.ಅವರು ಜೋಡಿಯಾಗಿಯೇ ಇರಬೇಕಿತ್ತು.

ಪರಂಪರಾಗತ ವಿಧಾನಕ್ಕಿಂತ ವಿಚಲಿತವಾದ ಬಗೆಯ ಇನ್ನೋರ್ವ ನಟ ಗೋಡೆ ನಾರಾಯಣ ಹೆಗ್ಡೆ ಕೂಡ ಚಿಟ್ಟಾಣಿಯು ಓರ್ವ ಮುಖ್ಯ ಇದಿರುವೇಷ!

ಕೆರೆಮನೆ ಮಹಾಬಲ ಹೆಗಡೆ ಅವರೊಂದಿಗೆ ಹೆಚ್ಚು ಭಾಗವಹಿಸಿದ ಬಳಿಕ, ಚಿಟ್ಟಾಣಿ ಅವರ ಮಾತುಗಾರಿಕೆಯಲ್ಲೊಂದು ಬದಲಾವಣೆ ಬಂದು ಸಂಸ್ಕಾರ ಬಂದುದು ಗಮನಾರ್ಹ.

ಚಿಟ್ಟಾಣಿ-ಶಂಭು ಹೆಗಡೆ!:

ಮಹೋನ್ನತ ಕಲಾರೂಪಕ ವರನಟ ಶಂಭು ಹೆಗಡೆ ಮತ್ತು ‘ಜನಪದಶಾಸ್ತ್ರೀಯ’ ನಟ ಚಿಟ್ಟಾಣಿ ಅವರ ಸಂಬಂಧದ ಬಗ್ಗೆ ಹೇಳಲೇಬೇಕು. ಅವರು ಸಮ ವಯಸ್ಕರು. ಸುಮಾರು ನಾಲ್ಕು ದಶಕ ಕಾಲ ರಂಗದಲ್ಲಿ ಪ್ರಮುಖ ನಟರಾಗಿ, ಪರೋಕ್ಷ ಸ್ಪರ್ಧಿಗಳಾಗಿ ವಿಭಿನ್ನ ರೀತಿಗಳಲ್ಲಿ ಮೆರೆದವರು. ಆದರೆ ಹದಿಹರೆಯ ದಿನಗಳನ್ನು ಬಿಟ್ಟರೆ ಮತ್ತೆಂದೂ ಅವರು ರಂಗದಲ್ಲಿ ಒಟ್ಟಾಗಲೇ ಇಲ್ಲ! ಆ ಪ್ರಯತ್ನಗಳೂ ವಿಫಲವಾದವು. ಅದೇ ಒಂದು ಚರ್ಚೆಯಾಯಿತು, ಕಥನವಾಯಿತು. ಜನ ಹೋಲಿಸಿದರು, ಪಕ್ಷ ಪಂಗಡವಾದರು, ನಡೆಯದ ‘ರಂಗ ಸ್ಪರ್ಧೆ’ ರಸಿಕ ಜನರಂಗದಲ್ಲಿ ನಡೆದೇ ಇತ್ತು. ಯಾಕೆ ಹೀಗೆ?

ಕೆರೆಮನೆ ಸೋದರರು ಸಾಲಿಗ್ರಾಮ ಮೇಳಕ್ಕೆ ಬಂದು (1967) ಉತ್ತರ ಕನ್ನಡದ ಶೈಲಿಗೆ ಬಡಗುತಿಟ್ಟಿನ ವ್ಯವಸಾಯಿ ರಂಗದಲ್ಲಿ ದೊಡ್ಡ ಮನ್ನಣೆ ಒದಗಿಸಿದರು. ಅವರನ್ನು ಈ ಕಡೆ ತಂದ ಯಜಮಾನ ಪಾರಂಪಳ್ಳಿ ಶ್ರೀಧರ ಹಂದೆ ಅವರೇ - ಬೇರೆ ಮೇಳ ಮಾಡಿದಾಗ, ಪ್ರತಿ ಆಕರ್ಷಣೆಯಾಗಿ ಚಿಟ್ಟಾಣಿಯನ್ನು ಕರೆತಂದರು! ಹೀಗೆ ಅವರ ಆಗಮನವೇ ಒಂದು ಸ್ಫೂರ್ತಿ - ಸ್ಪರ್ಧೆಯಾಗಿ, ಹಂದೆ ಅವರು ಚಿಟ್ಟಾಣಿಗೆ ಬಹಳ ಕಾಲ ಆಶ್ರಯ ನೀಡಿದ ಓರ್ವ ಪೋಷಕ ಸಂಘಟಕ.

1974ರಲ್ಲಿ ಶಂಭು ಹೆಗಡೆ ಸ್ವಂತ ಮೇಳ (ಶ್ರೀ ಇಡಗುಂಜಿ ಮಂಡಳಿ) ಮಾಡಿದರು. ಶಂಭು ಚಿಟ್ಟಾಣಿ ಒಂದೇ ರಂಗಕ್ಕೆ ಬರಬೇಕೆಂದು ಜನರ ಒತ್ತಡವೂ ಇತ್ತು. ಅದ್ಭುತ ವಾಣಿಜ್ಯ ಸಾಧ್ಯತೆಯೂ ಇತ್ತ್ತು. 1977ರ ಸುಮಾರಿಗೆ ಶಂಭು ಹೆಗಡೆ ಚಿಟ್ಟಾಣಿಯವರನ್ನು ಅವರ ಶರತ್ತುಗಳಿಗೆಲ್ಲ ಒಪ್ಪಿ ತನ್ನ ಮೇಳಕ್ಕೆ ಗೊತ್ತುಪಡಿಸಿದ್ದರು. ಅದೇಕೋ ಚಿಟ್ಟಾಣಿ ನಿರ್ಧಾರ ಬದಲಿಸಿದರು. ಶಂಭು ಹೆಗಡೆ ಮನಸ್ಸು ಮುರಿಯಿತು, ಮತ್ತೆಂದೂ ಅವರು ಜತೆಗೆ ವೇಷ ಮಾಡಲು ಒಪ್ಪಲಿಲ್ಲ. ಇದು ಒಂದು ವೃತ್ತಾಂತ. ಚಿಟ್ಟಾಣಿಯವರಿಗೆ ಆ ನಿರ್ಭಂಧವಿರಲಿಲ್ಲ, ಅವರು ‘ನಾನು ಯಾವಾಗಲೂ ಸೈ’ ಎಂದರು. ತಾನೇ ಶಂಭುವನ್ನು ಒತ್ತಾಯಿಸಿದರು. ಕೆಲ ಸಂಘಟಕರೂ ಒತ್ತಡ ಹಾಕಿದರು. ದೊಡ್ಡ ಸಂಭಾವನೆ ಆಮಿಷ ತಂದರು. ಶಂಭು ‘ಇಲ್ಲ, ನಾನು ಮಾರಾಟಕ್ಕಿಲ್ಲ, ನನ್ನದು ಸೈದ್ಧಾಂತಿಕ ನಿರ್ಧಾರ’ ಅಂದರು! ಎಂದೂ ನಡೆಯದ ಮಹಾ ಜೋಡಿ ಬಾಕಿ ಆಯಿತು. ಎಲ್ಲೆಲ್ಲೂ ಚರ್ಚೆ ಆಯಿತು. ಅವರಿಬ್ಬರೊಳಗೆ ವೈಯಕ್ತಿಕ ಸಂಬಂಧ ಚೆನ್ನಾಗಿತ್ತು. ಮನೆಗಳಿಗೆ ಭೇಟಿ, ಊಟ, ಉಪಚಾರ, ವಾರ್ತಾಲಾಪ ಎಲ್ಲ ಇತ್ತು. ಶಿವರಾಮ ಹೆಗಡೆ ರಂಗ ಮಂದಿರ ನಿರ್ಮಾಣವಾಗುತ್ತಿದ್ದಾಗಲೂ ಚಿಟ್ಟಾಣಿ ಹಲವು ಬಾರಿ ಭೇಟಿ ನೀಡಿದ್ದರು.

ಮುಂದೆ ಕೆರೆಮನೆ ಮಂಡಳಿ ಶಿವರಾಮ ಹೆಗಡೆ ಪ್ರಶಸ್ತಿಯೂ ಅವರಿಗೆ ಸಂದಿತು. ಸಂಬಂಧಗಳು ಎಷ್ಟು ವಿಚಿತ್ರ ಅಲ್ಲವೇ?. ಈ ವಿಚಾರದಲ್ಲಿ ಶಂಭು ಹೆಗಡೆ ಜಿಗುಟು ನಿಲುವು ತಳೆದರೇ? ರಸಿಕರಿಗೆ ದೊಡ್ಡದೊಂದು ಹಬ್ಬವನ್ನು ನಿರಾಕರಿಸಿದರೇ? ಅಲ್ಲ, ಧೀರನಾಗಿ ತನ್ನ ನಿಲುವಿಗೆ ಅಂಟಿನಿಂತರೇ? ವಿಭಿನ್ನ ಅಭಿಮತಗಳು ಸಾಧ್ಯ.

ಆರೋಗ್ಯ ಪವಾಡ:

ಚಿಟ್ಟಾಣಿ ಎತ್ತರವಿಲ್ಲದ ಸಣಕಲು ದೇಹ, ಕೊಬ್ಬಿಲ್ಲದ, ಬಾಗೆ ಮರದಂತಹ ದೃಢ ಶರೀರದವರು. ರೂಪ ಸುಂದರರಲ್ಲ. ಆದರೆ ಯಾವುದೇ ವೇಷಕ್ಕೆ, ಸ್ತ್ರೀ ಪಾತ್ರಕ್ಕೂ ಆಗುವ ಪ್ರಸನ್ನ ಆಕರ್ಷಕ ಮುಖ, ವಯಸ್ಸು ಕಾಣದ ಆರೊಗ ದೃಢಕಾಯ. ಸತತ ತಿರುಗಾಟ, ಎರಡು ಮೂರು ವೇಷ, ದೀರ್ಘ ಪ್ರಯಾಣ - ಅವರಿಗೆ ಲೆಕ್ಕವೇ ಅಲ್ಲ. ಅವರಿಗೆ ಪ್ರಾಯಃ ಸ್ಪರ ಭಂಗವಾದುದಿರಲಿಕ್ಕಿಲ್ಲ, ದೀರ್ಘಕಾಲ ಬೀಡಿ ಸೇವನೆ ಮತ್ತು ದ್ರವ ಪದಾರ್ಥದ ಚಟ ಇದ್ದೂ, ಅವರು ಆರೋಗ್ಯವಂತರಾಗಿದ್ದರು. ಅನಾರೋಗ್ಯದಿಂದ ರಜೆ ಮಾಡಿದ್ದಿಲ್ಲ. ಈ ಬಗ್ಗೆ ಅವರೊಂದು ಔಷಧ ಕಂಡು ಹಿಡಿದಿದ್ದರು (ಜೇಡಿ ಮಣ್ಣು ತಿನ್ನುವುದು)!- ಎಂಬ ದಂತಕತೆಯೂಪ್ರಚಾರದಲ್ಲಿತ್ತು. ಚಿಟ್ಟಾಣಿ ಆರೋಗ್ಯಶಾಸ್ತ್ರಕ್ಕೂ ಒಂದು ಪ್ರಶ್ನೆಯಾಗಿದ್ದರು. Medical Wonder ಆಗಿದ್ದರು.

ವೀಸಾ ಅಭಿನಯ

ಅವರ ಯಶಸ್ಸಿನ ವೈಚಿತ್ರ ಹೇಗಿದೆ ಎಂದರೆ ಅಮೆರಿಕ ಪ್ರವೇಶಕ್ಕೆ ವೀಸಾ ಪಡೆಯಲು ಹೋದಾಗ ಅಧಿಕಾರಿಗೆ ಅವರು ಉತ್ತರಿಸಿದ್ದು ಅಭಿನಯ ಮೂಲಕ. ಅವರ ಮಗನು ಮಾತಿನ ಮೂಲಕ. ತಂದೆಗೆ ವೀಸಾ ಸಿಕ್ಕಿತು, ಮಗನಿಗಿಲ್ಲ! ಇದು ಚಿಟ್ಟಾಣಿಯ ಯೋಗ ವೈಶಿಷ್ಟ! ಸ್ವಲ್ಪ ತಡವಾಗಿ ಅವರಿಗೆ ವಿದೇಶ ಯಾತ್ರೆಯೂ ಒದಗಿತು.

ವಿಚಿತ್ರ ಅಂಗೀಕಾರ:

ಅವರ ಪಾತ್ರ ನಿರ್ವಹಣೆ, ಜೀವನಗಳಂತೆ ಅವರಿಗೆ ದೊರೆತ ಅಂಗೀಕಾರವೂ ವಿಲಕ್ಷಣ. ಎಲ್ಲೆಡೆ ಕಾಣುವ, ಉತ್ತರ ಕನ್ನಡ ಯಕ್ಷಗಾನ ವಲಯದಲ್ಲಿ ತೀವ್ರವಾಗಿಯೇ ಇರುವ, ಅಭಿಮಾನಿ ಬಳಗಗಳ ಪ್ರೀತಿ ಆವೇಶಗಳ ಮೇಲಾಟ, ಅತಿ ಪ್ರಶಂಸೆ, ಗುಂಪುಗಾರಿಕೆ ಎಲ್ಲಾ ಅಗುತ್ತ ಇರುತ್ತದೆ. ಚಿಟ್ಟಾಣಿ ಈ ವಿಷಯಗಳನ್ನು ಹೆಚ್ಚು ಹಚ್ಚಿಕೊಳ್ಳಲಿಲ್ಲ. ‘ವಿಮರ್ಶೆ ಹೇಗೂ ನನಗೆ ಓದಲು ಬರುವುದಿಲ್ಲ’ ಅನ್ನುತ್ತಿದ್ದರು.! ಅವರಿಗೆ ದೊಡ್ಡದಾದ ಒಂದು ಮೇಳಕ್ಕೆ ಆಧಾರವಾಗಬಲ್ಲ ಅಭಿಮಾನಿವರ್ಗವಿತ್ತು. ತನ್ನ ಜನಪ್ರಿಯತೆಯನ್ನು ನಿರ್ವಹಿಸುವ ರೀತಿಯೂ ಟಟ್ಠ್ಝಚ್ಟಜಿಠಿ ಚ್ಞಜಛಿಞಛ್ಞಿಠಿ ಚೆನ್ನಾಗಿತ್ತು. ಉಡುಪು ತೊಡುಪು, ಆಹಾರ ವ್ಯವಹಾರ ಬಲು ಸರಳ. ವ್ಯವಹಾರದಲ್ಲಿ ಬುದ್ಧಿವಂತ.

ಒಂದೊಂದು ಕಾಲದಲ್ಲಿ ಅವರನ್ನು ಟೀಕಿಸಿದ್ದ, ಹಗುರವಾಗಿ ಮಾತಾಡಿದ್ದ ಎಲ್ಲ ವಿಮರ್ಶಕರೂ, ಪ್ರಮುಖರು ಕೂಡ ಅವರನ್ನು ಒಪ್ಪಿದರು! ಎಲ್ಲ ಗುಂಪುಗಳ ಅಂಗೀಕಾರವೂ ದೊರಕಿತು. ಅವರ ಪ್ರಯತ್ನ ವಿಲ್ಲದೆ; ಇದೇ ಯೋಗ!.

ಅವರ ಬೃಹತ್ ಸಂಮಾನ ‘ರಸರಾಜ’ ಗ್ರಂಥದ ಉದ್ಘಾಟನೆಯಲ್ಲಿ ಶಂಭು ಹೆಗಡೆ ತುಂಬ ಸೊಗಸಾಗಿ ಉದಾರವಾಗಿ ಮಾತಾಡಿದರು. ಡಾ.ಜಿ.ಎಲ್. ಹೆಗಡೆ ನಿರೂಪಿಸಿದ ಅವರ ಆತ್ಮ ವೃತ್ತಾಂತ ‘ನಿಮ್ಮ ಚಿಟ್ಟಾಣಿ’ ಕೂಡ ವಿಶಿಷ್ಟ. ಹೆಸರಿನಂತೆ, ಅವರಂತೆ ಇದೆ.

ತನ್ನ ಬಗೆಗೆ:

ಚಿಟ್ಟಾಣಿ ಅವರಿಗೆ ತನ್ನ ಬಗೆಗೆ ಸ್ಪಷ್ಟತೆ ಇತ್ತು. ತಾನೇನು, ಎಷ್ಟು ಎಂದು ತಿಳಿದಿತ್ತು. ಅವರ ಈ ತಿಳಿವು ಮಾತು, ಕೃತಿ, ಸಂದರ್ಶನಗಳಲ್ಲಿ ಕಾಣುತ್ತಿತ್ತು. ಅಕಡಮಿಕ್ ಕಾರ್ಯಕ್ರಮ, ಗೋಷ್ಠಿ ಕಮ್ಮಟಗಳಲ್ಲಿ ಅವರು ಭಾಗವಹಿಸಲು ಹಿಂಜರಿಯುತ್ತಿದ್ದರು. ‘ನಾನಲ್ಲ, ಬೇರೆ ಇದ್ದಾರೆ.. ಇಂತಹವರನ್ನು ಕರೆಯಿರಿ’ ಎನ್ನುತ್ತಿದ್ದರು. ಆಸಕ್ತಿಯಿಂದ ಕುಳಿತು ಕೇಳಿ, ನೋಡಿ ಅನಂದಿಸುತ್ತಿದ್ದರು.

ಪ್ರಾತ್ಯಕ್ಷಿಕೆಗಾಗಿ ಒತ್ತಾಯಿಸಿದಾಗ - ಚೆನ್ನಾಗಿಯೇ ಮಾಡಿ ತೋರಿಸುತ್ತಿದ್ದರು. ಕತೆಯ ತಾತ್ವಿಕ ಚಿಂತನೆಗಳ ಬಗೆಗೆ ಅವರು ಮಾತಾಡುತ್ತಿರಲಿಲ್ಲ. ‘ನಾನು ಮಾಡಿ ತೋರಿಸುತ್ತೇನೆ, ಅದರಲ್ಲಿ ಏನು ಕಾಣುತ್ತದೋ ಅದನ್ನು ನೀವು ಬೇಕಾದಂತೆ ಅರ್ಥ ಮಾಡಿಕೊಳ್ಳಿ‘ ಅನ್ನುತ್ತಿದ್ದರು.

ಬಹುವರ್ಣಮುಖಿ:

ಚಿಟ್ಟಾಣಿ ಈ ಮೂರಕ್ಷರ ಭಾರತೀಯ ಕಲಾ ಪ್ರಪಂಚದ ಒಂದು ಬಹುಸೂಚಕವಾದ ರೂಪಕ. ವಿಭಿನ್ನ ಸಾಂಸ್ಕೃತಿಕ ಪ್ರಕಾರಗಳ ಮೇಲ್ಪಂಕ್ತಿಯ ಸಾಧಕರೊಂದಿಗೆ ಸಲ್ಲುವ ಶಬ್ದ ರೂಪಕ ಅದು. ಚಿಟ್ಟಾಣಿ- ಚಿಟ್, ಚಿಟ್ಟೆ ಎಂಬುದು ಮುದ್ದಾದ ಚಿಕ್ಕ, ಸತತ ಮಿಂಚುವ, ಚಲನೆಯ ಚೇತನ, ಸೊಬಗಿನ ಜೀವಂತಿಕೆಯ ಚೇತನ ಬಹುವರ್ಣ ಬಹುಮುಖಿ ಚಿಟ್ಟಾಣಿ.

ಅವರ ಕಲಾಮಾರ್ಗದ ಕುರಿತ ಚರ್ಚೆ ಇತ್ಯಾತ್ಮಕ ನೇತ್ಯಾತ್ಮಕಗಳೇನೇ ಇರಲಿ-ಸಾಮರ್ಥ್ಯ, ತೀವ್ರ ಪ್ರಭಾವ, ಪರಿಣಾಮಗಳಲ್ಲಿ ಪ್

Writer - ಡಾ. ಎಂ. ಪ್ರಭಾಕರ ಜೋಶಿ

contributor

Editor - ಡಾ. ಎಂ. ಪ್ರಭಾಕರ ಜೋಶಿ

contributor

Similar News