ಪುಟಿನ್‌ರನ್ನೂ ನಂಬುವೆ, ಗುಪ್ತಚರ ಸಂಸ್ಥೆಯನ್ನೂ ನಂಬುವೆ: ಟ್ರಂಪ್

Update: 2017-11-12 15:58 GMT

ಹನೋಯ್ (ವಿಯೆಟ್ನಾಂ), ನ. 12: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿಲ್ಲ ಎಂಬ ತನ್ನದೇ ಹೇಳಿಕೆಯನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಂಬುತ್ತಾರೆ ಎಂದು ತಾನು ನಂಬುತ್ತೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಆದರೆ, ಅದೇ ವೇಳೆ, ತಾನು ಅಮೆರಿಕದ ಗುಪ್ತಚರ ಸಂಸ್ಥೆಗಳನ್ನೂ ನಂಬುವುದಾಗಿ ಟ್ರಂಪ್ ಹೇಳುತ್ತಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆ ಎಂಬುದಾಗಿ ಅಮೆರಿಕದ ಗುಪ್ತಚರ ಸಂಸ್ಥೆಗಳು ತೀರ್ಮಾನಿಸಿವೆ.

 ‘‘ತಾನು (ಪುಟಿನ್) ಮತ್ತು ರಶ್ಯ ಅಮೆರಿಕದ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿಲ್ಲ ಎಂಬುದಾಗಿ ಅವರು ಭಾವಿಸುತ್ತಾರೆ ಎಂದು ನಾನು ನಂಬುತ್ತೇನೆ’’ ಎಂದು ಹನೋಯ್‌ಯಲ್ಲಿ ವಿಯೆಟ್ನಾಂ ಅಧ್ಯಕ್ಷ ಟ್ರಾನ್ ಡೈ ಕ್ವಾಂಗ್ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News