ರಶ್ಯದ ಹಸ್ತಕ್ಷೇಪ: ತೆರೇಸಾ ಮೇ ಆರೋಪ

Update: 2017-11-14 17:16 GMT

ಲಂಡನ್, ನ. 14: ಪಾಶ್ಚಾತ್ಯ ಸರಕಾರಗಳ ಇಲಾಖೆಗಳಿಗೆ ಕನ್ನಹಾಕುವ ಹಾಗೂ ಆ ದೇಶದ ಚುನಾವಣೆಗಳಲ್ಲಿ ಹಸ್ತಕ್ಷೇಪ ನಡೆಸುವ ಅಥವಾ ‘ಮಾಹಿತಿಯನ್ನು ಆಯುಧವನ್ನಾಗಿಸುವ’ ಯತ್ನಗಳಲ್ಲಿ ರಶ್ಯ ಯಶಸ್ವಿಯಾಗುವುದಿಲ್ಲ ಎಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ಸೋಮವಾರ ಹೇಳಿದ್ದಾರೆ.

ಲಂಡನ್ ಲಾರ್ಡ್ ಮೇಯರ್ ವಾರ್ಷಿಕ ಔತಣಕೂಟದಲ್ಲಿ ಪ್ರಮುಖ ವಿದೇಶ ನೀತಿ ಭಾಷಣ ಮಾಡಿದ ಮೇ, ರಶ್ಯದ ವಿರುದ್ಧ ಅಸಹಜವೆನ್ನುವಂತೆ ಕಠಿಣ ಭಾಷೆ ಬಳಸಿದರು.

ಬ್ರೆಕ್ಸಿಟ್ ಬಳಿಕ, ಆರ್ಥಿಕತೆಗಳನ್ನು ಮತ್ತು ಮುಕ್ತ ಸಮಾಜಗಳನ್ನು ರೂಪಿಸುವ ಪ್ರಯತ್ನಗಳನ್ನು ರಶ್ಯ ಮುಂತಾದ ದೇಶಗಳು ದುರ್ಬಲಗೊಳಿಸುತ್ತಿವೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News