ನಿಮಗೇನು ತಲೆಕೆಟ್ಟಿದೆಯಾ?: ಮಾಧ್ಯಮಗಳಿಗೆ ಈಶ್ವರಪ್ಪ ಪ್ರಶ್ನೆ

Update: 2017-11-16 06:20 GMT

ಬೆಂಗಳೂರು, ನ.16: ರಾಜ್ಯಸರಕಾರ ಜಾರಿ ತರಲು ಉದ್ದೇಶಿಸಿರುವ ಕೆಪಿಎಂಇ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ಪ್ರತಿಪಕ್ಷ ಬಿಜೆಪಿ ಗುರುವಾರ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗೆ ಸಾಥ್ ನೀಡಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಈ ಕಾಯ್ದೆಯನ್ನು ರದ್ದುಪಡಿಸಲಾಗುವುದು ಎಂದು ಭರವಸೆ ನೀಡಿದೆ ಎನ್ನಲಾಗಿದೆ.

ವಿಪಕ್ಷದ ಇಬ್ಬಗೆ ನೀತಿ ಪ್ರಶ್ನಿಸಿದ ಮಾಧ್ಯಮಗಳ ಮೇಲೆ ವಿಧಾನಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹರಿಹಾಯ್ದಿದ್ದಾರೆ.

ಖಾಸಗಿ ವೈದ್ಯರ ಮುಷ್ಕರದಿಂದಾಗಿ ರಾಜ್ಯದ ಜನಸಾಮಾನ್ಯರು ಪರದಾಡುವಂತಾಗಿದೆ. ಹಲವು ಜೀವ ಬಲಿಯಾಗಿದೆ. ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡುತ್ತಿರುವ ನೀವು ಜನಸಾಮಾನ್ಯರ ಪರವಾಗಿಲ್ಲವೇ? ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉದ್ಧಟತನದಿಂದ ಉತ್ತರ ನೀಡಿದ ಈಶ್ವರಪ್ಪ,‘’ನಿಮಗೇನು ತಲೆ ಕೆಟ್ಟಿದೆಯಾ? ಎಂದು ಪ್ರಶ್ನಿಸಿ ಕಾಲ್ಕಿತ್ತರು.

ಗುರುವಾರ ರಾಜ್ಯದ ಹೊರರೋಗಿ ವಿಭಾಗವನ್ನು(ಒಪಿಡಿ) ಮುಚ್ಚಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಖಾಸಗಿ ವೈದ್ಯರು ಸರಕಾರ ವಿರುದ್ಧ ಆಕ್ರೋಶ ಮುಂದುವರಿಸಿದ್ದಾರೆ. ‘‘ಸರಕಾರ ಇನ್ನೂ ಕೆಪಿಎಂಸಿ ಕಾಯ್ದೆಯನ್ನು ಜಾರಿಗೆ ತಂದಿಲ್ಲ. ಕಾಯ್ದೆ ಜಾರಿಗೆ ಮೊದಲು ವೈದ್ಯರ ಬಳಿ ಚರ್ಚಿಸಲಾಗುವುದು. ಕಾಯ್ದೆ ಜಾರಿಯಾಗುವ ಮುನ್ನವೇ ವೈದ್ಯರು ಮುಷ್ಕರ ನಡೆಸುತ್ತಿರುವುದು ಸರಿಯಲ್ಲ’’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News