ರಾಜ್ಯಸರಕಾರ-ಖಾಸಗಿ ವೈದ್ಯರ ಸಂಘಟನೆಗೆ ಹೈಕೋರ್ಟ್ ಡೆಡ್‌ಲೈನ್

Update: 2017-11-16 07:11 GMT

ಬೆಂಗಳೂರು, ನ.16: ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೆಪಿಎಂಇ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರವನ್ನು ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿರುವ ಹೈಕೋರ್ಟ್, ಸರಕಾರ ಹಾಗೂ ವೈದ್ಯಕೀಯ ಸಂಘಟನೆ ಈ ಬಗ್ಗೆ ಮಾತುಕತೆ ನಡೆಸಿವೆಯೇ?. ಈ ಬಗ್ಗೆ ಸರಕಾರ-ವೈದ್ಯಕೀಯ ಸಂಘಟನೆಯ ಸ್ಪಷ್ಟ ನಿಲುವೇನು? ಎಂಬ ಮಾಹಿತಿ ನೀಡಲು ಸಿಜೆ ರಮೇಶ್‌ಗೆ ಹೈಕೋರ್ಟ್ ಸೂಚಿಸಿದೆ. ಮಧ್ಯಾಹ್ನ 2 ಗಂಟೆಯೊಳಗೆ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಸೂಚಿಸಿದೆ.

ಖಾಸಗಿ ವೈದ್ಯರ ಮುಷ್ಕರವನ್ನು ಪ್ರಶ್ನಿಸಿ ಆದಿನಾರಾಯಣ ಶೆಟ್ಟಿ ಹಾಗೂ ಅಮೃತೇಶ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಗೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಮಧ್ಯಾಹ್ನ 2:30ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News