ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ಅಗತ್ಯ: ಬಿಲ್ ಗೇಟ್ಸ್

Update: 2017-11-17 04:29 GMT

ಹೊಸದಿಲ್ಲಿ, ನ. 17: ಭಾರತದ ಶಿಕ್ಷಣ ವ್ಯವಸ್ಥೆ ಪ್ರಸ್ತುತ ಇರುವ ಸ್ಥಿತಿಗಿಂತ ಗಣನೀಯವಾಗಿ ಸುಧಾರಿಸಬೇಕಾದ ಅಗತ್ಯವಿದೆ ಎಂದು ಐಟಿ ದಿಗ್ಗಜ ಬಿಲ್ ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಅತಿಥಿ ಸಂಪಾದಕರಾಗಿ ಆಗಮಿಸಿದ್ದ ಅವರು, ಭಾರತದ ಸಾರ್ವಜನಿಕ ಆರೋಗ್ಯ, ತಂತ್ರಜ್ಞಾನ ಹಾಗೂ ವಿಶ್ವವನ್ನು ಬದಲಿಸಬಹುದಾದ ತಮ್ಮ ಕಲ್ಪನೆಗಳನ್ನು ಹಂಚಿಕೊಂಡಿದ್ದಾರೆ. ಎರಡು ದಶಕ ಕಾಲ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಗೇಟ್ಸ್ ಅವರ ಸ್ಥಾನವನ್ನು ಇತ್ತೀಚೆಗೆ ಜೆಫ್ ಬೆಜೋಸ್ ಆಕ್ರಮಿಸಿಕೊಂಡಿದ್ದರು.

ಭಾರತದ ಸಾಧನೆ ಬಗ್ಗೆ ಕೇಳಿದ ಪ್ರಶ್ನೆಗೆ, "ಹಲವು ವಿದ್ಯಮಾನಗಳು ಧನಾತ್ಮವಾಗಿಯೇ ಇದೆ. ಆದರೆ ದೊಡ್ಡ ನಿರಾಸೆ ಎಂದರೆ ಭಾರತದ ಶಿಕ್ಷಣ ವ್ಯವಸ್ಥೆ. ಇದು ಇನ್ನಷ್ಟು ಉತ್ತಮವಾಗಬೇಕು. ಇದರ ವಿಮರ್ಶೆಗೆ ನಾನು ಹೋಗುವುದಿಲ್ಲ. ಆದರೆ ಈ ಬಗ್ಗೆ ಉನ್ನತ ನಿರೀಕ್ಷೆಯನ್ನು ಸೃಷ್ಟಿಸಬೇಕಾಗಿದೆ" ಎಂದು ಉತ್ತರಿಸಿದರು.

ಭಾರತದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಯೋಜನೆ ಬಗ್ಗೆ ಗಮನ ಸೆಳೆದಾಗ, "ಶೌಚಾಲಯಗಳನ್ನು ನಿರ್ಮಿಸುವುದು ಬ್ಯಾಂಕ್ ಖಾತೆ ತೆರೆದಂತೆ. ಆದರೆ ವಾಸ್ತವ ಸವಾಲು ಇರುವುದು ಜನ ಅದನ್ನು ಬಳಸುವಂತೆ ಮಾಡುವುದು" ಎಂದು ಚುಟುಕಾಗಿ ಉತ್ತರಿಸಿದರು.

"ಭಾರತದ ಕೆಲವು ಭಾಗಗಳಲ್ಲಿ ಇದು ಅದ್ಭುತ ಫಲಿತಾಂಶ ನೀಡಿದೆ. ಕೆಲವೆಡೆ ಅಷ್ಟೊಂದು ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಮೊದಲ ಹಂತದಲ್ಲಿ ಜನರ ಮನೋಪ್ರವೃತ್ತಿಯಲ್ಲಿ ಬದಲಾವಣೆಯಾಗಬೇಕು. ಯಾರು ಕೂಡಾ ಬಯಲು ಶೌಚ ಮಾಡಬಾರದು ಎಂಬ ಭಾವನೆ ಗ್ರಾಮೀಣ ಜನರಲ್ಲಿ ದಟ್ಟವಾಗಬೇಕು" ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News