ಮೂಡಿಸ್ ರೇಟಿಂಗ್‌ನ ಸಂಭ್ರಮಾಚರಣೆ: ಕೇಂದ್ರ ಸರಕಾರವನ್ನು ಟೀಕಿಸಿದ ಯಶ್ ವಂತ್ ಸಿನ್ಹಾ

Update: 2017-11-17 18:14 GMT

ಹೊಸದಿಲ್ಲಿ,ನ.17: ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ ಮೂಡಿಸ್ ಭಾರತದ ರೇಟಿಂಗ್‌ನ್ನು ಮೇಲ್ದರ್ಜೆಗೇರಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದ ಮಾಜಿ ವಿತ್ತಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು, ರೇಟಿಂಗ್ ಸಂಸ್ಥೆ ಸ್ಟಾಂಡರ್ಡ್ ಆ್ಯಂಡ್ ಪೂರ್ಸ್ ಭಾರತವನ್ನು ದಶಕಗಳಿಂದಲೂ ಕನಿಷ್ಠ ಹೂಡಿಕೆ ದರ್ಜೆಯಲ್ಲಿರಿಸಿದೆ ಎನ್ನುವುದನ್ನು ಸರಕಾರಕ್ಕೆ ಪರೋಕ್ಷವಾಗಿ ನೆನಪಿಸಿದರು. ಮೂಡಿಸ್‌ನಿಂದ ಭಾರತದ ಭಡ್ತಿಯ ಸಂಭ್ರವನ್ನಾಚರಿಸುತ್ತಿರುವುದಕ್ಕಾಗಿ ಸರಕಾರವನ್ನು ಅವರು ತರಾಟೆಗೆತ್ತಿಕೊಂಡರು.

ಸರಕಾರದ ಆರ್ಥಿಕ ನೀತಿಗಳನ್ನು ಸಿನ್ಹಾ ಟೀಕಿಸುತ್ತಿರುವುದು ಇದೇ ಪ್ರಥಮವೇನಲ್ಲ. ಈ ಹಿಂದೆ ಆರ್ಥಿಕತೆಯನ್ನು ಇಷ್ಟೊಂದು ಅಧ್ವಾನಗೊಳಿಸಿರುವುದಕ್ಕೆ ವಿತ್ತಸಚಿವ ಅರುಣ್ ಜೇಟ್ಲಿಯವರನ್ನು ಅವರು ದೂಷಿಸಿದ್ದರು. ನೋಟು ಅಮಾನ್ಯವನ್ನು ‘ಶಮನಗೊಳಿಸಲಾಗದ ಆರ್ಥಿಕ ವಿಪತ್ತು’ಎಂದು ಬಣ್ಣಿಸಿದ್ದ ಅವರು, ಜಿಎಸ್‌ಟಿಯನ್ನು ‘ಕೆಟ್ಟ ಪರಿಕಲ್ಪನೆ ಮತ್ತು ಕಳಪೆಯಾಗಿ ಜಾರಿಗೊಳಿಸಿದ ಕ್ರಮ’ ಎಂದು ಕರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News