ಅನಿವಾಸಿ ಭಾರತೀಯರು ಆಧಾರ್ ಲಿಂಕ್ ಮಾಡಬೇಕಿಲ್ಲ: ವಿಶಿಷ್ಟ ಗುರುತು ಪ್ರಾಧಿಕಾರ

Update: 2017-11-18 06:48 GMT

ಹೊಸದಿಲ್ಲಿ, ನ.18: ಅನಿವಾಸಿ ಭಾರತೀಯರು ಹಾಗೂ ಇತರ ದೇಶಗಳಲ್ಲಿರುವ ಭಾರತೀಯ ಮೂಲದ ವ್ಯಕ್ತಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಹಾಗು ಮತ್ತಿತರ ಸೇವೆಗಳನ್ನು ಆಧಾರ್ ಜತೆ ಜೋಡಿಸುವ ಅಗತ್ಯವಿಲ್ಲ ಎಂದು ವಿಶಿಷ್ಟ ಗುರುತು ಪ್ರಾಧಿಕಾರ ಹೇಳಿದೆ.

ಆಧಾರ್ ಪಡೆಯಲು ಅರ್ಹರಾದವರು ಮಾತ್ರ ತಮ್ಮ ಬ್ಯಾಂಕ್ ಖಾತೆಗಳನ್ನು ಹಾಗೂ ಪ್ಯಾನ್ ಸಂಖ್ಯೆಯನ್ನು ಅದಕ್ಕೆ ಜೋಡಿಸಬೇಕಿದೆ ಎಂದು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ನಿಯಮಾವಳಿಗಳು-2017 ಹಾಗೂ ಆದಾಯ ತೆರಿಗೆ ಕಾಯಿದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಆಧಾರ್ ಕಾಯ್ದೆಯನ್ವಯ ಯಾರು ಅರ್ಹರೋ ಅವರು ಮಾತ್ರ ಆಧಾರ್ ಕಾರ್ಡುಗಳನ್ನು ಪಡೆಯಬಹುದೆನ್ನುವ ಅಂಶವನ್ನು ಎಲ್ಲಾ ಸರಕಾರಗಳೂ ಹಾಗೂ ಇಲಾಖೆಗಳೂ ಗಮನದಲ್ಲಿಡಬೇಕು ಹಾಗೂ ಹೆಚ್ಚಿನ ಅನಿವಾಸಿ ಭಾರತೀಯರು, ಇತರ ದೇಶಗಳಲ್ಲಿರುವ ಭಾರತೀಯ ಮೂಲದ ಜನರು ಹಾಗೂ  ವಿದೇಶಗಳಲ್ಲಿರುವ ಭಾರತೀಯ ನಾಗರಿಕರು ಆಧಾರ್ ಕಾರ್ಡ್ ಪಡೆಯಲು ಅರ್ಹರಲ್ಲ ಎಂದು ಅದು ತಿಳಿಸಿದೆ.

ಕೆಲವು ಇಲಾಖೆಗಳು ಹಾಗೂ ಏಜನ್ಸಿಗಳು ಇಂತಹ ಜನರಿಂದ ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್ ಸಂಖ್ಯೆಯೊಡನೆ ಜೋಡಿಸಬೇಕೆಂದು ಹೇಳುತ್ತಿರುವುದು ತನ್ನ ಗಮನಕ್ಕೆ ಬಂದಿದೆ ಎಂದೂ ಪ್ರಾಧಿಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News