ಟ್ರಂಪ್ ರಾಜೀನಾಮೆಗೆ ಆಗ್ರಹಿಸಿದ ಟ್ವೀಟನ್ನು ರಿಟ್ವೀಟ್ ಮಾಡಿದ ಅಮೆರಿಕದ ರಕ್ಷಣಾ ಇಲಾಖೆ!

Update: 2017-11-18 13:35 GMT

ವಾಷಿಂಗ್ಟನ್, ನ.18 : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಯಾರೋ ಮಾಡಿದ ಟ್ವೀಟನ್ನು ತಾನು ಪ್ರಮಾದವಶಾತ್ ರಿಟ್ವೀಟ್ ಮಾಡಿದ್ದಾಗಿ ಅಮೆರಿಕದ ರಕ್ಷಣಾ ಇಲಾಖೆ

 ಪೆಂಟಗಾನ್ ತಪ್ಪೊಪ್ಪಿಕೊಂಡಿದೆ. ಮೂಲ ಟ್ವೀಟ್ ನಲ್ಲಿ ಏನು ಬರೆಯಲಾಗಿತ್ತು ಎಂಬುದನ್ನು ಉಲ್ಲೇಖಿಸದೆ ಪೆಂಟಗಾನ್ ವಕ್ತಾರ ಕರ್ನಲ್ ರಾಬ್ ಮ್ಯಾನಿಂಗ್ ‘‘ಈ ಟ್ವೀಟ್ ಅನ್ನು ರಕ್ಷಣಾ ಇಲಾಖೆ ಬೆಂಬಲಿಸುವುದಿಲ್ಲ,’’ ಎಂದು ಹೇಳಿದ್ದಾರೆ.

ಟ್ವಿಟರ್ ಹ್ಯಾಂಡಲ್ @ಪ್ರೌಡ್‌ರೆಸಿಸ್ಟರ್ ನಿಂದ ಗುರುವಾರ ಪೋಸ್ಟ್ ಮಾಡಲ್ಪಟ್ಟ ಈ ಟ್ವೀಟ್ ನಲ್ಲಿ ‘‘ಪರಿಹಾರ ಸರಳ. ರಾಯ್ ಮೂರ್ : ಸ್ಪರ್ಧೆಯಿಂದ ಕೆಳಗಿಳಿಯಿರಿ ; ಅಲ್ ಪ್ರಾಂಕೆನ್ : ಕಾಂಗ್ರೆಸ್ ನಿಂದ ರಾಜೀನಾಮೆ ನೀಡಿ ; ಡೊನಾಲ್ಡ್ ಟ್ರಂಪ್ : ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಡಿ: ಜಿಒಪಿ : ಲೈಂಗಿಕ ಹಲ್ಲೆಯನ್ನು ಒಂದು ತಾರತಮ್ಯ ವಿಷಯವನ್ನಾಗಿಸುವುದನ್ನು ನಿಲ್ಲಿಸಿ. ನಿಮ್ಮ ಬೂಟಾಟಿಕೆಯಂತೆ ಅದು ಕೂಡ ಅಪರಾಧ,’’ ಎಂದು ಬರೆದಿದ್ದ.

ಈ ಟ್ವೀಟ್ ಅನ್ನು ರಕ್ಷಣಾ ಇಲಾಖೆಯ ಟ್ವಿಟರ್ ಖಾತೆಯನ್ನು ಅಧಿಕೃತವಾಗಿ ನಿರ್ವಹಿಸುವವರೊಬ್ಬರು ರಿಟ್ವೀಟ್ ಮಾಡಿದ್ದಾರೆ. ತಪ್ಪನ್ನು ಅರಿತ ಅವರು ಕೂಡಲೇ ರಿಟ್ವೀಟ್ ಡಿಲೀಟ್ ಮಾಡಿದ್ದಾರೆ ಎಂದು ಮ್ಯಾನಿಂಗ್ ಹೇಳಿದ್ದಾರೆ. ರಕ್ಷಣಾ ಇಲಾಖೆಯ ಟ್ವಿಟರ್ ಖಾತೆಗೆ 5.2 ಮಿಲಿಯನ್ ಫಾಲೋವರ್ಸ್ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News