×
Ad

ಗಾಝಾದಲ್ಲಿ ದಾಳಿ ತೀವ್ರಗೊಳಿಸಿದ ಇಸ್ರೇಲ್

Update: 2024-05-17 22:32 IST

ಸಾಂದರ್ಭಿಕ ಚಿತ್ರ PC : NDTV

ಗಾಝಾ: ರಫಾದ ಮೇಲೆ ಭೂದಾಳಿಯನ್ನು ತೀವ್ರಗೊಳಿಸುವುದಾಗಿ ಇಸ್ರೇಲ್ ಘೋಷಿಸಿದ ಬೆನ್ನಲ್ಲೇ ಗಾಝಾಪಟ್ಟಿಯ ಉತ್ತರದಲ್ಲಿರುವ ಜಬಾಲಿಯಾ ನಿರಾಶ್ರಿತರ ಶಿಬಿರ ಪ್ರದೇಶದಲ್ಲಿ ಇಸ್ರೇಲ್ ಹೆಲಿಕಾಪ್ಟರ್ ಗಳು ಬಾಂಬ್‍ದಾಳಿ ನಡೆಸಿವೆ ಎಂದು ವರದಿಯಾಗಿದೆ.

ಇಸ್ರೇಲ್‍ನ ಸಮರನೌಕೆಗಳು ರಫಾದ ಮೇಲೆ ದಾಳಿ ಮುಂದುವರಿಸಿದೆ. ಜಬಾಲಿಯಾದ ಕಮಲ್ ಅದ್ವಾನ್ ಆಸ್ಪತ್ರೆಯ ಬಳಿಯ ಮನೆಗಳನ್ನು ಗುರಿಯಾಗಿಸಿ ಇಸ್ರೇಲ್ ಪಡೆ ಫಿರಂಗಿ ದಾಳಿ ನಡೆಸಿದ್ದು ಕನಿಷ್ಟ 6 ಮಂದಿ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News