14 ಶಾಸಕರಿಗೆ ಕೊಕ್: ಗುಜರಾತ್ ಬಿಜೆಪಿಯಲ್ಲಿ ಬಂಡಾಯದ ಭೀತಿ

Update: 2017-11-21 05:55 GMT

ಅಹ್ಮದಾಬಾದ್, ನ. 21: ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಂತೆ ಬಿಜೆಪಿ 27 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, 14 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿರುವುದು ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರುವ ಎಲ್ಲ ಲಕ್ಷಣಗಳಿವೆ.

89 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತದೆ. ಜಲಸಂಪನ್ಮೂಲ ಸಚಿವ ನಾನೂ ವನಾನಿ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಜಯಂತಿ ಕವಾಡಿಯಾ, ಕೃಷಿ ಸಚಿವ ವಲ್ಲಭ್ ವಘಾಸಿಯಾ ಟಿಕೆಟ್ ವಂಚಿತರಲ್ಲಿ ಸೇರಿದ್ದಾರೆ.

ನವಸಾರಿಯಿಂದ ಸ್ಪರ್ಧಿಸಬಯಸಿದ್ದ ಮಾಜಿ ಸಿಎಂ ಆನಂದಿಬೆನ್ ಪಟೇಲ್ ಅವರ ಪುತ್ರಿ ಅನರ್ ಅವರಿಗೂ ನಿರಾಸೆಯಾಗಿದ್ದು, ಹಾಲಿ ಶಾಸಕ ಪಿಯೂಶ್ ದೇಸಾಯಿ ಅವರನ್ನೇ ಉಳಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ. ಇದುವರೆಗೆ ಬಿಜೆಪಿ 135 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪೈಕಿ ಕೇವಲ 9 ಮಹಿಳೆಯರಿದ್ದಾರೆ. ಈ ಪೈಕಿ 41 ಮಂದಿ ಒಬಿಸಿ ಹಾಗೂ 34 ಪಾಟಿದಾರರಿಗೆ ಟಿಕೆಟ್ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News