ಕೊಚ್ಚಿ: ನೌಕಾಪಡೆಯ ಕಣ್ಗಾವಲು ವಿಮಾನ ಪತನ

Update: 2017-11-21 09:25 GMT

ಕೊಚ್ಚಿ, ನ.21: ಭಾರತೀಯ ನೌಕಾಪಡೆಯ ರಿಮೋಟ್ ಪೈಲೆಟೆಡ್ ವಿಮಾನವೊಂದು ಪತನಗೊಂಡ ಘಟನೆ ಕೊಚ್ಚಿಯಲ್ಲಿ ನಡೆದಿದೆ.

ದೈನಂದಿನ ಕಣ್ಗಾವಲು ಕಾರ್ಯಾಚರಣೆಯ ಸಂದರ್ಭ ವಿಲ್ಲಿಂಗ್ ಡನ್ ದ್ವೀಪದಲ್ಲಿ 10:30ರ ಸುಮಾರಿಗೆ ಎಚ್ ಎಚ್ ಎ ಟರ್ಮಿನಲ್ ನಲ್ಲಿ ವಿಮಾನ ಪತನವಾಗಿದೆ.

ಹಾರಾಟದ ಸಂದರ್ಭ ಉಂಟಾದ ದೋಷದಿಂದಾಗಿ ವಿಮಾನವು ಎತ್ತರವನ್ನು ಪಡೆಯಲು ಸಾಧ್ಯವಾಗಿಲ್ಲ ಹಾಗು ನಿಯಂತ್ರಣ ಕಳೆದುಕೊಂಡಿತು ಎಂದು ನೌಕಾಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಪತನಗೊಂಡ ವಿಮಾನವು ಐಎನ್ ಎಸ್ ಗರುಡ ಏರ್ ಫ್ಲೀಟ್ ನ ಭಾಗವಾಗಿದ್ದು, ಪತನಗೊಳ್ಳಲು ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News