ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರುಗಳ ಫೋಟೊ ಕಳಿಸಿ, ಹಣ ಪಡೆಯಿರಿ

Update: 2017-11-21 09:42 GMT

ಹೊಸದಿಲ್ಲಿ, ನ.21: ಪಾರ್ಕಿಂಗ್ ನಿಯಮ ಉಲ್ಲಂಘಿಸಿ ಪಾರ್ಕ್ ಮಾಡಿರುವ ಕಾರುಗಳ ಫೋಟೊ ತೆಗೆದು ಸಂಬಂಧಪಟ್ಟವರಿಗೆ ಕಳುಹಿಸಿದಲ್ಲಿ ವಾಹನ ಮಾಲಕರಿಗೆ ವಿಧಿಸುವ 500 ರೂ. ದಂಡದಲ್ಲಿ 10 ಶೇ.ದಷ್ಟು ಹಣವನ್ನು ಪಡೆಯಬಹುದು ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸಚಿವಾಲಯದ ಹೊರಭಾಗದಲ್ಲಿ ಪಾರ್ಕಿಂಗ್ ಜಾಗ ಇಲ್ಲದೆ ‘ರಾಯಭಾರಿ’ಗಳು ಹಾಗ ‘ಗಣ್ಯರು’ ರಸ್ತೆಯಲ್ಲೇ ವಾಹನ ನಿಲ್ಲಿಸುವುದರಿಂದ ತನಗೆ ನಾಚಿಕೆಯಾಗುತ್ತದೆ ಎಂದವರು ಹೇಳಿದ್ದಾರೆ.

“ನನ್ನ ಮೋಟಾರ್ ವಾಹನ ಕಾಯ್ದೆಯಲ್ಲಿ ನಾನು ಹೊಸ ಕಾನೂನನ್ನು ಸೇರಿಸಲಿದ್ದೇನೆ. ರಸ್ತೆಯಲ್ಲಿ ಕಾರು ನಿಲ್ಲಿಸಿದರೆ ನಿಮ್ಮ ಮೊಬೈಲ್ ನಲ್ಲಿ ಅದರ ಫೋಟೊ ತೆಗೆಯಿರಿ ಹಾಗು ಅದನ್ನು ಸಂಬಂಧಪಟ್ಟವರಿಗೆ ಅಥವಾ ಪೊಲೀಸರಿಗೆ ಕಳುಹಿಸಿ, 500 ರೂ. ದಂಡದಲ್ಲಿ ದೂರುದಾರರಿಗೆ 10 ಶೇ.ದಷ್ಟು ಹಣ ನೀಡಲಾಗುವುದು” ಎಂದು ಗಡ್ಕರಿ ಹೇಳಿದ್ದಾರೆ.

“ಪ್ರತಿದಿನವೂ ನನಗೆ ನಾಚಿಕೆ ಎನಿಸುತ್ತಿದೆ… ರಾಯಭಾರಿಗಳು ಬಂದರೆ, ಗಣ್ಯರ ಬಂದರೆ ಪಾರ್ಲಿಮೆಂಟ್ ನ ಮುಂದೆ ಇಡೀ ರಸ್ತೆ ಬ್ಲಾಕ್ ಆಗುತ್ತದೆ. ಪಾರ್ಕಿಂಗ್ ಜಾಗವನ್ನು ನಿರ್ಮಿಸುವುದಕ್ಕೋಸ್ಕರ ನನಗೆ 13 ಅನುಮತಿಗಳು ಬೇಕಾಗಿದೆ” ಎಂದವರು ಇದೇ ಸಂದರ್ಭ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News