ಪತಿಯನ್ನು 8 ತುಂಡುಗಳಾಗಿ ಕತ್ತರಿಸಿದ ಮಹಿಳೆಗೆ 30 ವರ್ಷ ಕಾರಾಗೃಹ ಶಿಕ್ಷೆ

Update: 2017-11-22 15:57 GMT

 ಚಂಡಿಗಢ, ನ. 22: ಪತಿಯನ್ನು 8 ತುಂಡುಗಳಾಗಿ ಕತ್ತರಿಸಿ ಕ್ರೂರವಾಗಿ ಹತ್ಯೆಗೈದ ಮಹಿಳೆಯೋರ್ವಳಿಗೆ ಹರ್ಯಾಣದ ಝಜ್ಜಾರ್ ಪಟ್ಟಣದ ನ್ಯಾಯಾಲಯ 30 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಝಜ್ಜಾರ್ ಜಿಲ್ಲೆ ಅಸಂಡ ಗ್ರಾಮದಲ್ಲಿ ಕಳೆದ ವರ್ಷ ಎಪ್ರಿಲ್‌ನಲ್ಲಿ 38ರ ಹರೆಯದ ಬಲ್‌ಜೀತ್‌ರನ್ನು ಹತ್ಯೆಗೈದ ಪೂಜಾಗೆ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.

ಆದಾಗ್ಯೂ, ಈ ಪ್ರಕರಣದಲ್ಲಿ ಹೆಸರಿಸಲಾದ ಇತರ ನಾಲ್ಕು ಜನರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯ, ಈ ಕ್ರೂರ ಹತ್ಯೆಗೆ ಪೂಜಾ ಮಾತ್ರ ಹೊಣೆಗಾರ್ತಿ ಎಂದಿದೆ. ತನ್ನ ಸಹೋದರ ನಾಪತ್ತೆಯಾಗಿದ್ದಾನೆ ಎಂದು ಕಳೆದ ವರ್ಷ ಎಪ್ರಿಲ್ 26ರಂದು ಬಲ್‌ಜೀತ್ ಸಹೋದರ ಕುಲ್‌ಜೀತ್ ಪೊಲೀಸ್ ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News