“ಭಾರತದಲ್ಲಿ ಉಳಿಯಬೇಕಾದರೆ ವಂದೇಮಾತರಂ ಹೇಳಬೇಕು”

Update: 2017-11-23 08:30 GMT

ಹೈದರಾಬಾದ್, ನ.23: ನ್ಯಾಯಾಲಯವೊಂದರ ಹೊರಭಾಗದಲ್ಲಿ ಸಂಘಪರಿವಾರ ಕಾರ್ಯಕರ್ತರು ದಲಿತ ಚಿಂತಕ, ಸಾಮಾಜಿಕ  ಹೋರಾಟಗಾರ ಕಂಚ ಐಲಯ್ಯ ಅವರಿಗೆ ಮುತ್ತಿಗೆ ಹಾಕಿದ ಘಟನೆ ಜಗಿತಾಲ್ ಜಿಲ್ಲೆಯ ಕೊರುಟ್ಲಾ ಪಟ್ಟಣದಲ್ಲಿ ನಡೆದಿದೆ ಎಂದು hindustantimes.com ವರದಿ ಮಾಡಿದೆ.

ಆರ್ಯ ವೈಶ್ಯ ಸಮುದಾಯದವರು ಹಾಗು ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ದಾಳಿ ನಡೆಸಿ, ಕತ್ತರಿಸಿ ಹಾಕುವುದಾಗಿ ಬೆದರಿಕೆ ಒಡ್ಡಿದರು. ಭಾರತದಲ್ಲಿ ಉಳಿಯಲು ಬಯಸಿದ್ದರೆ ‘ವಂದೇ ಮಾತರಂ’ ಹೇಳಬೇಕು ಎಂದು ಬಲವಂತಪಡಿಸಿದರು ಎಂದು ಐಲಯ್ಯ ಆರೋಪಿಸಿದ್ದಾರೆ.

ಐಲಯ್ಯ ಕಾರಿನಲ್ಲಿ ಕುಳಿತುಕೊಳ್ಳಬೇಕಾದರೆ ಕೇಸರಿ ಧ್ವಜಗಳನ್ನು ಹಿಡಿದುಕೊಂಡ ಗುಂಪೊಂದು ಅವರನ್ನು ಸುತ್ತುವರಿಯಿತು ಹಾಗು ಘೋಷಣೆಗಳನ್ನು ಕೂಗಿತು. ಕೆಲವರು ಈ ಸಂದರ್ಭ ಅವರಿಗೆ ಚಪ್ಪಲಿಯಲ್ಲಿ ಹೊಡೆಯಲು ಪ್ರಯತ್ನಿಸಿದರು. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

“ತಕ್ಷಣವೇ ಪೊಲೀಸರು ಅವರನ್ನು ರಕ್ಷಿಸಿ ಕಾರಿನೊಳಗೆ ಕುಳ್ಳಿರಿಸಿದರು” ಎಂದು ಕೊರುಟ್ಲಾ ಪೊಲೀಸ್ ಇನ್ ಸ್ಪೆಕ್ಟರ್ ರಾಜಶೇಖರ್ ಬಾಬು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News