ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯ ದಿನಾಂಕ ಪ್ರಕಟ

Update: 2017-11-23 12:37 GMT

ಬೆಂಗಳೂರು, ನ.23: ರಾಜ್ಯದ ಬೆಂಗಳೂರು ನಗರ, ಚಿಕ್ಕಮಗಳೂರು, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ವಿವಿಧ ಕಾರಣಗಳಿಂದ ತೆರವುಗೊಂಡಿದ್ದ ನಗರ ಸ್ಥಳೀಯ ಸಂಸ್ಥೆ ವಾರ್ಡ್‌ಗಳ ಉಪ ಚುನಾವಣೆಯ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.

ಬೆಂಗಳೂರು ನಗರದ ಬೊಮ್ಮಸಂದ್ರ ಪುರಸಭೆ (ವಾರ್ಡ್ ನಂ.16), ಚಿಕ್ಕಮಗಳೂರಿನ ಕಡೂರು ಪುರಸಭೆ(ವಾರ್ಡ್ ನಂ.14), ವಿಜಯಪುರ ಇಂಡಿ ಪುರಸಭೆ(ವಾರ್ಡ್ ನಂ.15) ಹಾಗೂ ಕಲಬುರಗಿ ಜಿಲ್ಲೆಯ ವಾಡಿ ಪುರಸಭೆ(ವಾರ್ಡ್ ನಂ.1)ಗೆ ಚುನಾವಣೆಗಳು ನಡೆಯಲಿವೆ.

ಜಿಲ್ಲಾಧಿಕಾರಿಗಳು ಚುನಾವಣಾ ದಿನ ನ.29 ರಂದು ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನ ಡಿ.6 ಹಾಗೂ ನಾಮಪತ್ರ ಪರಿಶೀಲನೆ ಡಿ.7 ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಡಿ.9 ರವರೆಗೆ ಕಾಲಾವಕಾಶ ನೀಡಲಾಗಿದೆ. ಮತದಾನ (ಮತದಾನ ಅವಶ್ಯಕವಿದ್ದರೆ) ಡಿ.17 ರಂದು ನಡೆಯಲಿದ್ದು, ಮರು ಮತದಾನ(ಅಗತ್ಯವಿದ್ದರೆ ಮಾತ್ರ) ಡಿ.19 ರಂದು ನಡೆಯುತ್ತದೆ. ಅಂತಿಮವಾಗಿ ಮತ ಎಣಿಕೆ ಡಿ.20 ರಂದು ನಡೆಯುತ್ತದೆ. ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ವಾರ್ಡ್ ವ್ಯಾಪ್ತಿಯಲ್ಲಿ ನ.29 ರಿಂದ ಡಿ.20 ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News