ತಂತ್ರಜ್ಞಾನ ಬಳಕೆಯಿಂದ ಸಬ್ಸಿಡಿಗಳಲ್ಲಿ 10 ಶತಕೋಟಿ ಉಳಿತಾಯ: ಪ್ರಧಾನಿ ಮೋದಿ

Update: 2017-11-23 13:10 GMT

ಹೊಸದಿಲ್ಲಿ,ನ.23: ತಂತ್ರಜ್ಞಾನ, ಬ್ಯಾಂಕ್ ಖಾತೆಗಳು ಮತ್ತು ಆಧಾರ್ ಮೂಲಕ ಸರಕಾರಿ ಸೌಲಭ್ಯಗಳ ನೇರ ವರ್ಗಾವಣೆಯಿಂದಾಗಿ ಸಬ್ಸಿಡಿಗಳಲ್ಲಿ ಸೋರಿಕೆಯನ್ನು ನಿವಾರಿಸಿ 10 ಶತಕೋಟಿ ಡಾ.ಗಳಷ್ಟು ಹಣವನ್ನು ಉಳಿಸಲು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಲ್ಲಿ ತಿಳಿಸಿದರು.

ಸೈಬರ ಸ್ಪೇಸ್ ಕುರಿತು ಜಾಗತಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ತಂತ್ರಜ್ಞಾನವು ಎಲ್ಲ ಅಡೆತಡೆಗಳನ್ನು ನಿವಾರಿಸಿದೆ. ಜೊತೆಗೆ ಸಮರ್ಥ ಸೇವಾ ಪೂರೈಕೆ, ಆಡಳಿತಕ್ಕೆ ಕಾರಣವಾಗಿದೆ ಮತ್ತು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರವನ್ನು ಇನ್ನಷ್ಟು ಕೈಗೆಟಕುವಂತೆ ಮಾಡಿದೆ ಎಂದರು.

ಡಿಜಿಟಲ್ ಸಂಪರ್ಕದ ಮೂಲಕ ಸಶಕ್ತೀಕರಣಕ್ಕೆ ಸರಕಾರವು ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

ಸೈಬರ್ ದಾಳಿಗಳು ಮಹತ್ವಪೂರ್ಣ ಬೆದರಿಕೆಗಳಾಗಿವೆ ಎಂದು ಬಣ್ಣಿಸಿದ ಮೋದಿ, ಡಿಜಿಟಲ್ ಕ್ಷೇತ್ರವನ್ನು ಭೀತಿವಾದಕ್ಕೆ ಮತ್ತು ಮೂಲಭೂತೀಕರಣಕ್ಕೆ ಬಳಸಲು ಅವಕಾಶ ನೀಡಬಾರದು. ವಿಶ್ವದ ದೇಶಗಳು ಈ ಬಗ್ಗೆ ಜವಾಬ್ದಾರಿಯನ್ನು ಹೊರಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News