ಡಿ.10 ರಂದು ಸಿನೆಮಾ ಸಂತೆ

Update: 2017-11-23 14:49 GMT

ಬೆಂಗಳೂರು, ನ.23: ಪ್ರಸ್ತುತ ಸಿನೆಮಾ ಸಂತೆ ನಡೆಸುವ ಅಗತ್ಯವಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಇಂದಿಲ್ಲಿ ಹೇಳಿದ್ದಾರೆ.

ಸಿನೆಮಾ ಸೂರು ಸಂಸ್ಥೆಯ ವತಿಯಿಂದ ಡಿ.10ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಸಲಾಗುತ್ತಿರುವ ಸಿನಿಮಾರಂಗಕ್ಕೆ ಸಂಬಂಧಿಸಿದ ಸಿನೆಮಾ ಸಂತೆ ಕುರಿತಂತೆ ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯು ಇಂತಹ ಪ್ರಯತ್ನ ನಡೆಸಲಾಗಿತ್ತು. ಈಗ ಅದನ್ನು ಕಾರ್ಯರೂಪಕ್ಕೆ ಯುವಜನರು ತರುತ್ತಿರುವುದು ಒಳ್ಳೆಯ ಉದ್ದೇಶವಾಗಿದೆ. ಇದರಿಂದ ಸಿನಿಮಾ ತಾಂತ್ರಿಕ ವರ್ಗದಲ್ಲಿಯೂ ಕೆಲಸ ಮಾಡುವವರ ಸಂಪೂರ್ಣ ಮಾಹಿತಿ ಸಂಗ್ರಹ ಸಾಧ್ಯವಾಗಲಿದೆ ಎಂದರು.

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಅನುಪಮ ಮಾತನಾಡಿ, ಸಿನೆಮಾ ಸಂತೆ ನಡೆಸುತ್ತಿರುವುದು ವಿನೂತನ ಪ್ರಥಮ ಪ್ರಯತ್ನವಾಗಿದೆ. ಈ ಸಂತೆಯಲ್ಲಿ ಹೊಸ ನಿರ್ಮಾಪಕರು, ನಿರ್ದೇಶಕರು, ನಟರು, ಸಂಗೀತ ನಿರ್ದೇಶಕರು ಹೀಗೆ ಪ್ರತಿಯೊಬ್ಬರು ಪರಿಚಯಿಸಿಕೊಳ್ಳಲು ಅವಕಾಶ ದೊರೆಯಲಿದೆ. ಆಸಕ್ತರು ಸಂತೆಗೆ ನೇರವಾಗಿಯೂ ಬಂದು ಭಾಗವಹಿಸಬಹುದು ಅಥವಾ ಹೆಚ್ಚಿನ ವಿವರ ಮಾಹಿತಿಗಾಗಿ 8310086759 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News