ಪಿಎಫ್‌ ನೀಡುವಂತೆ ಒತ್ತಾಯಿಸಿ ಗಾರ್ಮೆಂಟ್ಸ್ ಕಾರ್ಮಿಕರ ಧರಣಿ

Update: 2017-11-23 16:45 GMT

ಬೆಂಗಳೂರು, ನ.23: ಪಿಎಫ್ ಮೊತ್ತ ಹಾಗೂ ಸರಿಯಾಗಿ ಸಂಬಳ ನೀಡುವಂತೆ ಒತ್ತಾಯಿಸಿ ಗೊರಗುಂಟೆಪಾಳ್ಯದ ಬಾಂಬೆ ರೈ ಗಾರ್ಮೆಂಟ್ಸ್ ಆವರಣದಲ್ಲಿ ಕಾರ್ಮಿಕರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

5 ವರ್ಷಗಳಿಂದ ಅಪೆಕ್ಸ್ ಗಾರ್ಮೆಂಟ್ಸ್ ಕಂಪೆನಿಯಲ್ಲಿ 400 ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ‘ಈಗ ಕಂಪೆನಿಯನ್ನು ಬಾಂಬೆ ರೈ ಕಂಪೆನಿಗೆ ಮಾರಾಟ ಮಾಡಲಾಗಿದೆ. ಹಾಗಾಗಿ ಈ ಹಿಂದಿನ ಕಂಪೆನಿಯಲ್ಲಿ ಕಡಿತ ಮಾಡಲಾದ ಪಿಎಫ್ ಮೊತ್ತವನ್ನು ನೀಡಲ್ಲ ಎಂದು ಬಾಂಬೆ ರೈ ಕಂಪೆನಿಯವರು ಹೇಳುತ್ತಿದ್ದಾರೆ’ ಎಂದು ಪ್ರತಿಭಟನಾಕಾರು ಅಸಮಾಧಾನ ತೋಡಿಕೊಂಡರು.

ರೈ ಕಂಪೆನಿಯಲ್ಲಿ ಸಂಬಳವನ್ನು ಸರಿಯಾಗಿ ನೀಡುತ್ತಿಲ್ಲ. ಕಳೆದ ಮೂರು ದಿನಗಳಲ್ಲಿ ಮಕ್ಕಳ ಸಮೇತ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದೇವೆ. ಕಂಪೆನಿಯ ಆಡಳಿತ ಮಂಡಳಿ ನಮ್ಮ ಬೇಡಿಕೆಗಳಿಗೆ ಕಿವಿಗೊಡುತ್ತಿಲ್ಲ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News