ಮೆಸ್ಸಿಗೆ ಗೋಲ್ಡನ್ ಶೂ

Update: 2017-11-24 18:31 GMT

ಮ್ಯಾಡ್ರಿಡ್, ನ.24: ಕಳೆದ ಋತುವಿನಲ್ಲಿ ಯುರೋಪ್ ಲೀಗ್‌ನಲ್ಲಿ ಗರಿಷ್ಠ ಗೋಲು ಬಾರಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬಾರ್ಸಿಲೋನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಗೋಲ್ಡನ್ ಶೂ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಫಾರ್ವರ್ಡ್ ಆಟಗಾರ ಮೆಸ್ಸಿ ನಾಲ್ಕನೇ ಬಾರಿ ಗೋಲ್ಡನ್ ಶೂ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ರಿಯಲ್ ಮ್ಯಾಡ್ರಿಡ್‌ನ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಸರಿಗಟ್ಟಿದರು. ಮೆಸ್ಸಿ ಸ್ಪಾನೀಸ್ ಲೀಗ್‌ನಲ್ಲಿ 37 ಗೋಲುಗಳನ್ನು ಬಾರಿಸಿದ್ದರು. ಡಚ್‌ನ ಸ್ಟ್ರೈಕರ್ ಬಾಸ್ ಡೊಸ್ಟ್ ಪೋರ್ಚುಗಲ್ ಲೀಗ್‌ನಲ್ಲಿ ಲಿಸ್ಬನ್ ಪರ 34 ಗೋಲುಗಳನ್ನು ಬಾರಿಸಿದ್ದರು. 30ರ ಹರೆಯದ ಮೆಸ್ಸಿ ಯುರೋಪ್ ಲೀಗ್‌ನಲ್ಲಿ 2009-10(34 ಗೋಲುಗಳು),2011-12(50) ಹಾಗೂ 2012-13ರಲ್ಲಿ 46 ಗೋಲುಗಳನ್ನು ಬಾರಿಸಿದ್ದರು.

ಮೆಸ್ಸಿಗೆ ಸಹ ಆಟಗಾರ ಲೂಯಿಸ್ ಸುಯರೆಝ್ ಪ್ರಶಸ್ತಿ ಪ್ರದಾನಿಸಿದರು. ಸುಯರೆಝ್ 2015-16ರಲ್ಲಿ 40 ಗೋಲುಗಳನ್ನು ಬಾರಿಸಿದ್ದಕ್ಕೆ ಈ ಪ್ರಶಸ್ತಿ ಸ್ವೀಕರಿಸಿದ್ದರು.

ಕಳೆದ 9 ವರ್ಷಗಳಿಂದ ಮೆಸ್ಸಿ, ರೊನಾಲ್ಡೊ ಹಾಗೂ ಸುಯರೆಝ್ ಗೋಲ್ಡನ್ ಶೂ ಪ್ರಶಸ್ತಿ ಹಂಚಿಕೊಳ್ಳುತ್ತಿದ್ದಾರೆ. ಯುರೋಪ್ ಸ್ಪೋರ್ಟ್ಸ್ಸ್ ನ್ಯೂಸ್‌ಪೇಪರ್ ಹಾಗೂ ಮ್ಯಾಗಝಿನ್‌ಗಳ ಸಹಯೋಗದಲ್ಲಿ ಯುರೋಪ್ ಸ್ಪೋರ್ಟ್ಸ್ ಮಾಧ್ಯಮ ಈ ಪ್ರಶಸ್ತಿ ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News