ಅಮಿತ್ ಶಾ ಹಿಂದೂ ಅಲ್ಲವೇ ಅಲ್ಲ: ರಾಜ್ ಬಬ್ಬರ್ ತಿರುಗೇಟು

Update: 2017-12-01 05:46 GMT

 ಹೊಸದಿಲ್ಲಿ, ಡಿ.1: ರಾಹುಲ್ ಗಾಂಧಿ ಧರ್ಮ ಯಾವುದು ಎಂದು ಬಿಜೆಪಿ ಪ್ರಶ್ನಿಸಿರುವುದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಪಕ್ಷ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಿಂದೂವೇ ಅಲ್ಲ ಎಂದು ಹೇಳಿದೆೆ.
"ಅಮಿತ್ ಶಾ ಜೈನ ಧರ್ಮಕ್ಕೆ ಸೇರಿದವರು. ಅವರು ಹಿಂದೂವೇ ಅಲ್ಲ. ರಾಹುಲ್ ಗಾಂಧಿ ಕುಟುಂಬದವರು ಶಿವ ಭಕ್ತರಾಗಿದ್ದು, ಅವರ ಅಜ್ಜಿ ಇಂದಿರಾಗಾಂಧಿ ರುದ್ರಾಕ್ಷಿ ಮಾಲೆ ಧರಿಸುತ್ತಿದ್ದರು. ರಾಹುಲ್ ಹಿಂದೂ ಬ್ರಾಹ್ಮಣಕ್ಕೆ ಸೇರಿದವರು'' ಎಂದು ಕಾಂಗ್ರೆಸ್‌ನ ವಕ್ತಾರ ರಾಜ್ ಬಬ್ಬರ್ ಶುಕ್ರವಾರ ಹೇಳಿದ್ದಾರೆ.

ಬಬ್ಬರ್ ಹೇಳಿಕೆಯ ಮೂಲಕ ಗುಜರಾತ್ ಚುನಾವಣೆ ಹೊಸ್ತಿಲಲ್ಲಿ ಧರ್ಮ ಯುದ್ದ ಸಾರಿರುವ ಬಿಜೆಪಿಗೆ ಕಾಂಗ್ರೆಸ್ ಎದಿರೇಟು ನೀಡ ತೊಡಗಿದೆ. ಇತ್ತೀಚೆಗೆ ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ರಾಹುಲ ಗಾಂಧಿ ಅವರು ಅಹ್ಮದ್ ಪಟೇಲ್‌ರೊಂದಿಗೆ ಭೇಟಿ ನೀಡಿದ ಸಂದರ್ಭ ಸಂದರ್ಶಕರ ಪುಸ್ತಕದಲ್ಲಿ ಹಿಂದೂಯೇತರ ಕಾಲಂನಲ್ಲಿ ಸಹಿ ಹಾಕಿದ್ದರು ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಹುಲ್ ಯಾವ ಧರ್ಮಕ್ಕೆ ಸೇರಿದವರು ಎಂದು ಪ್ರಶ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News