ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣ: ಪಿ.ಚಿದಂಬರಂ ಬಂಧು,ಸ್ನೇಹಿತರ ಮನೆಗಳಿಗೆ ಇಡಿ ದಾಳಿ

Update: 2017-12-01 12:53 GMT

ಹೊಸದಿಲ್ಲಿ,ಡಿ.1: ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ)ವು ಶುಕ್ರವಾರ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ಬಂಧುವೋರ್ವರ ಮನೆಗಳು ಸೇರಿದಂತೆ ಚೆನ್ನೈನ ನಾಲ್ಕು ಮತ್ತು ಕೋಲ್ಕತಾದ ಎರಡು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಸೋದರಮಾವ ಸದಯವೇಲ ಕೈಲಾಸಂ ಅವರಿಗೆ ಸೇರಿದ ಚೆನ್ನೈನ ತೆಯ್ನಂಪೇಟ್‌ನಲ್ಲಿರುವ ಎರಡು ನಿವಾಸಗಳು, ಸುಜಯ ಸಾಂಬಮೂರ್ತಿಯವರ ತಿರುವಾಣ್ಮಿಯೂರು ಮತ್ತು ರಾಮ್ಜಿ ನಟರಾಜನ್ ಅವರ ಆಲ್ವಾರಪೇಟ್ ನಿವಾಸಗಳ ಮೇಲೆ ದಾಳಿಗಳು ನಡೆದಿವೆ. ಅತ್ತ ಕೋಲ್ಕತಾದಲ್ಲಿ ಚಿದಂಬರಂ ಅವರ ಸ್ನೇಹಿತ ಮನೋಜ ಮೊಹಾಂಕಾ ಅವರಿಗೆ ಸೇರಿದ ಎರಡು ಸ್ಥಳಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದವು.

ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿ ಕಾರ್ತಿ ಮತ್ತು ಅವರಿಗೆ ಸಂಬಂಧಿಸಿದ ಕಂಪನಿಯೊಂದರ 1.16 ಕೋ.ರೂ.ವೌಲ್ಯದ ಆಸ್ತಿಗಳನ್ನು ಇಡಿ ವಶಪಡಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರದ ದಾಳಿಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News