ಪಿಎಂಎಲ್‌ಎ ಪ್ರಕರಣ: ಇಡಿಯಿಂದ ಭುಜಬಲ್‌ಗೆ ಸೇರಿದ 20.41 ಕೋ.ರೂ.ಆಸ್ತಿ ಸ್ವಾಧೀನ

Update: 2017-12-05 13:06 GMT

ಮುಂಬೈ,ಡಿ.5: ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಮತ್ತು ಇತರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ)ವು ಅವರಿಗೆ ಸೇರಿದ 20.41 ಕೋ.ರೂ.ಮೌಲ್ಯದ ಆಸ್ತಿಗಳ ಜಪ್ತಿಗೆ ನೋಟಿಸ್ ಹೊರಡಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿರುವ ಆಸ್ತಿಗಳ ಒಟ್ಟು ಮೌಲ್ಯ 178 ಕೋ.ರೂ. ಗೇರಿದೆ.

ಇಡಿ ಕಳೆದ ವರ್ಷ ಭುಜಬಲ್‌ರನ್ನು ಬಂಧಿಸಿದ್ದು, ಆಗಿನಿಂದಲೂ ಅವರು ಜೈಲಿನಲ್ಲಿದ್ದಾರೆ. ಅವರ ಪುತ್ರ ಹಾಗು ಎನ್‌ಸಿಪಿ ಶಾಸಕ ಪಂಕಜ್ ಮತ್ತು ಸೋದರ ಸಂಬಂಧಿ ಸಮೀರ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಭುಜಬಲ್ ಅವರು ರಾಜ್ಯದ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದಾಗ ಸ್ವೀಕರಿಸಿದ್ದ ಲಂಚದ ಹಣವನ್ನು ವರ್ಗಾಯಿಸಲು ಅಥವಾ ‘ಬಿಳಿ’ಯಾಗಿಸಲು ಅವರ ಕುಟುಂಬವು ಇತರ ಹಲವಾರು ಜನರೊಂದಿಗೆ ಸಂಚು ನಡೆಸಿತ್ತು ಎನ್ನುವುದು ಇಡಿ ಆರೋಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News