ಸಾಮಾಜಿಕ ಜಾಲತಾಣದಲ್ಲಿ ಹೆಚ್ ಡಿ ಕುಮಾರಸ್ವಾಮಿ ಮತ್ತೊಂದು ಹೆಜ್ಜೆ

Update: 2017-12-09 05:41 GMT

ಬೆಂಗಳೂರು, ಡಿ. 9: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ಸುದ್ದಿಯನ್ನು ಮೊಬೈಲ್ ಮೂಲಕ ಪಡೆಯುವ ಯೋಜನೆಗೆ ಅವರ ತಾಂತ್ರಿಕ ಸಲಹೆಗಾರರು ಯೋಜನೆ ಸಿದ್ಧಪಡಿಸಿದ್ದಾರೆ.

'ನಮ್ಮ ಹೆಚ್ ಡಿ ಕೆ' ಜಾಲತಾಣ ಈಗಾಗಲೇ ಫೇಸ್ ಬುಕ್ , ಟ್ವಿಟರ್, ಯು ಟ್ಯೂಬ್, ಸೌಂಡ್ ಕ್ಲೌಡ್ ನಲ್ಲಿ ಜನಪ್ರಿಯವಾಗಿದ್ದು, ಈಗ ಅದರ ಮುಂದುವರಿಕೆಯಾಗಿ ಮೊಬೈಲ್ ಸೇವೆ ಆರಂಭಿಸಲಿದೆ.

ಮೊಬೈಲ್  ಸಂಖ್ಯೆ 94838 6999 ಗೆ  ಮಿಸ್ ಕಾಲ್ ಕೊಟ್ಟರೆ ಸಾಕು ಆ ಸಂಖ್ಯೆ 'ನಮ್ಮ ಹೆಚ್ ಡಿ ಕೆ' ಸಾಮಾಜಿಕ ಜಾಲತಾಣದಲ್ಲಿ ನೊಂದಾಯಿಸಲ್ಪಡುತ್ತದೆ. ಆ ನಂತರ ಪ್ರತೀ ದಿನ ಮೂರು ಬಾರಿ ಎಚ್ ಡಿ ಕುಮಾರಸ್ವಾಮಿ ಅವರ ಸಭೆ ಸಮಾರಂಭ, ಭಾಷಣ, ಪತ್ರಿಕಾ ಗೋಷ್ಠಿ ಎಲ್ಲವೂ ಆ ನಂಬರ್ ನ ಮಾಲಕರಿಗೆ ಸಿಗುತ್ತದೆ.

ಕೇವಲ ಸುದ್ದಿಗಳಷ್ಟೇ ಅಲ್ಲದೆ ಆಡಿಯೋ, ವಿಡಿಯೋಗಳನ್ನೂ ಕಳುಹಿಸಲಾಗುತ್ತದೆ. ಪ್ರತೀ ದಿನ ಬೆಳಗ್ಗೆ ಎಚ್ ಡಿ ಕೆ ಅವರ ಕಾರ್ಯಕ್ರಮದ ವಿವರ ನೀಡುವ ಮೂಲಕ ಆರಂಭವಾಗುವ ಈ ಸುದ್ದಿ ಸೇವೆ ದಿನದ ಅಂತ್ಯಕ್ಕೆ ರೌಂಡ್ ಅಪ್ ನೀಡುವ ಮೂಲಕ ಮುಕ್ತಾಯವಾಗುತ್ತದೆ. 

'ಅಂತರ್ಜಾಲ ಆಧಾರಿತ ಮಾಧ್ಯಮಗಳು ಈಗ ಪ್ರಬಲವಾಗಿರುವುದರಿಂದ ನಮ್ಮ ವಿಚಾರಗಳನ್ನು ಆ ಮಾಧ್ಯಮದ ಮೂಲಕವೂ ಜನರಿಗೆ ತಲುಪಿಸಲು ಈ ಯೋಜನೆ ಹೊಂದಿದ್ದೇವೆ' ಎಂದು  ಎಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದರು. 

'ಅಮೆರಿಕಾದ ಚುನಾವಣೆಗಳು ಹಾಗೂ ಕಳೆದ ಸಾಲಿನ ಭಾರತದ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳು ಮಹತ್ವದ ಪಾತ್ರ ವಹಿಸಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ರಾಜ್ಯದ ಹಿತ ಕಾಯಲು ಸಿದ್ಧವಾಗಿರುವ ನಾವು ಜನರನ್ನು ತಲುಪುವ ಎಲ್ಲಾ ಮಾರ್ಗವನ್ನೂ ಬಳಸುತ್ತೇವೆ' ಎಂದು ತಿಳಿಸಿದರು. 

ಮಿಸ್ ಕಾಲ್ ಗಳನ್ನೂ ನೋಂದಾಯಿಸುವ ಸೇವೆ ಡಿ. 10 ರವಿವಾರದಿಂದ ಆರಂಭವಾಗಲಿದೆ. 

'ನಮ್ಮ ಎಚ್ ಡಿ ಕೆ' ಜಾಲತಾಣಗಳ ಲಿಂಕ್ ಈ ರೀತಿ ಇದೆ-

Fb: facebook . com/HDKumaraswamy.official/
Twitter : twitter.com/nammahdk
Sound cloud : soundcloud.com/kumaraswamy-hd
Instagram : instagram.com/nammahdk/?hl=en
You Tube : youtube.com/channel/UCFSgZcqqFwNMXbabOYelIUQ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News