ಗಾಝಾ: ಇಬ್ಬರು ಫೆಲೆಸ್ತೀನಿಯರನ್ನು ಗುಂಡಿಕ್ಕಿ ಕೊಂದ ಇಸ್ರೇಲ್ ಸೇನೆ

Update: 2017-12-09 08:57 GMT

ಗಾಝಾ,ಡಿ.8 : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೆರುಸಲೆಂ ನಗರವನ್ನು ಇಸ್ರೇಲ್ ದೇಶದ ರಾಜಧಾನಿಯನ್ನಾಗಿ ಮಾನ್ಯ ಮಾಡಿದ ನಂತರ  ಉಂಟಾದ ಘರ್ಷಣೆಯಲ್ಲಿ ಇಸ್ರೇಲ್ ಸೇನಾ ಪಡೆಗಳು ಗಾಝಾದಲ್ಲಿ ಇಬ್ಬರು ಫೆಲೆಸ್ತೀನಿಯರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ.

ಶುಕ್ರವಾರದ ಪ್ರಾರ್ಥನೆಯ ನಂತರ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಫೆಲೆಸ್ತೀನಿಯರು ಪ್ರತಿಭಟನೆ ನಡೆಸಿದ್ದು, ಈ ಸಂದರ್ಭ ಹಾರಿಸಲಾದ ಗುಂಡಿಗೆ ಇಬ್ಬರು ಮೃತಪಟ್ಟರೆ ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ರಂಪ್ ಅವರ ಘೋಷಣೆಯ ನಂತರ ಗುರುವಾರವೇ ಸಂಘರ್ಷ ಸ್ಥಿತಿ ಉಂಟಾಗಬಹುದೆಂಬ ನಿರೀಕ್ಷೆಯಿತ್ತಾದರೂ ಕೆಲವು ಫೆಲೆಸ್ತೀನಿಯರು ಮಾತ್ರ ಪ್ರತಿಭಟನೆಗಿಳಿದಿದ್ದರು. ಆದರೆ ಶುಕ್ರವಾರ  ಮಾತ್ರ ಪರಿಸ್ಥಿತಿ ಕೈಮೀರಿ ಹೋಗಿತ್ತು.

ಶುಕ್ರವಾರ ಇಸ್ರೇಲಿ ವಿಮಾನಗಳು ಗಾಝಾದ ಮೇಲೆ  ಬಾಂಬ್ ದಾಳಿ ಕೂಡ  ನಡೆಸಿವೆ. ಹತ್ತಿರದ ಇಸ್ರೇಲಿ ಪಟ್ಟಣಗಳಿಂದ ಕ್ಷಿಪಣಿಗಳ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ದಾಳಿಯಲ್ಲಿ  ಆರು ಮಕ್ಕಳೂ ಸೇರಿದಂತೆ ಕನಿಷ್ಠ  25 ಜನರಿಗೆ ಗಾಯಗಳುಂಟಾಗಿವೆ ಎಂದು ಫೆಲೆಸ್ತೀನಿ ಆರೋಗ್ಯ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News