ತ್ರಿವಳಿ ತಲಾಕ್ ‘ಇಸ್ಲಾಮ್ ನ ಸಾಮಾಜಿಕ ಪಿಡುಗು’ ಎಂದ ಬನಾರಸ್ ಹಿಂದೂ ವಿವಿ

Update: 2017-12-10 10:47 GMT

ಹೊಸದಿಲ್ಲಿ, ಡಿ.10: ಎಂ.ಎ. ಇತಿಹಾಸ ಮೊದಲ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ತ್ರಿವಳಿ  ತಲಾಕ್, ಹಲಾಲ ಬಗ್ಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಬನಾರಸ್ ಹಿಂದೂ ವಿವಿ ಮತ್ತೊಂದು ವಿವಾದವನ್ನು ಸೃಷ್ಟಿಸಿದೆ.

ತ್ರಿವಳಿ ತಲಾಕ್ ಮತ್ತು ಹಲಾಲ ಇಸ್ಲಾಮ್ ಧರ್ಮದಲ್ಲಿರುವ ಸಾಮಾಜಿಕ ಪಿಡುಗುಗಳು ಎಂದಿರುವ ಬನಾರಸ್ ವಿವಿ ಈ ಬಗ್ಗೆ ವಿವರಿಸುವಂತೆ ಹೇಳಲಾಗಿದೆ.

ರಾಣಿ ಪದ್ಮಾವತಿಯ ಬಗ್ಗೆ ಅನಿಸಿಕೆಗಳನ್ನು ತಿಳಿಸುವಂತೆಯೂ ಹೇಳಲಾಗಿದ್ದು, “ಜೋಹರ್ ಪದ್ಧತಿ ಎಂದರೇನು?, ಅಲ್ಲಾವುದ್ದೀನ್ ಖಿಲ್ಜಿ ಕಾಲದಲ್ಲಿ ರಾಣಿ ಪದ್ಮಾವತಿಯ ಜೋಹರ್ ಬಗ್ಗೆ ವಿವರಿಸಿ, ಸುಲ್ತಾನರ ಕಾಲಘಟ್ಟದಲ್ಲಿ ಮುಸ್ಲಿಮ್ ಮಹಿಳೆಯರ ಸ್ಥಾನದ ಬಗ್ಗೆ ವಿವರಿಸಿ” ಎನ್ನುವ ಪ್ರಶ್ನೆಯನ್ನೂ ಕೇಳಲಾಗಿದೆ.

ಈ ರೀತಿಯ ಪ್ರಶ್ನೆಗಳನ್ನು ಕೇಳುವ ಮೂಲಕ ವಿವಿಯು ಬಲಪಂಥೀಯ ಸಿದ್ಧಾಂತಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ ಎಂದು ವಿದ್ಯಾರ್ಥಿ ಗುಂಪುಗಳ ವಿವಿ ವಿರುದ್ಧ ಪ್ರತಿಭಟನೆಗಳನ್ನು ನಡೆಸಿವೆ. ಆದರೆ ಈ ಪ್ರಶ್ನೆಗಳಲ್ಲಿ ತಪ್ಪಿಲ್ಲ ಎಂದು ಕೆಲ ಶಿಕ್ಷಕರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿ ವಿಕಾಸ್ ಎಂಬವರು, “ಈ ರೀತಿಯ ಪ್ರಶ್ನೆಗಳಲ್ಲಿ ವಿವಿಗೆ ಯಾವ ತಪ್ಪೂ ಕಂಡು ಬಂದಿಲ್ಲ. ಆದರೆ ಈ ಪ್ರಶ್ನೆಗಳು ಅವಮಾನಕಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿರುವುದಾಗಿ ಎಎನ್ ಐ ವರದಿ ಮಾಡಿದೆ.

ಆದರೆ ವಿದ್ಯಾರ್ಥಿಗಳ ಆರೋಪವನ್ನು ವಿವಿಯ ಅಸಿಸ್ಟಂಟ್ ಪ್ರೊಫೆಸರ್ ರಾಜೀವ್ ಶ್ರೀವಾಸ್ತವ ನಿರಾಕರಿಸಿದ್ದು, ಈ ವಿಷಯಗಳು ಮಧ್ಯಕಾಲೀನ ಇತಿಹಾಸ ಭಾಗವಾಗಿದ್ದು, ಸಿಲೆಬಸ್ ನಲ್ಲಿದೆ ಎಂದಿದ್ದಾರೆ.

“ಬಾಲ್ಯವಿವಾಹ ಹಾಗು ಸತಿ ಪದ್ಧತಿಯ ಬಗ್ಗೆ ಆಲಿಘರ್ ಮುಸ್ಲಿಂ ವಿವಿ ಹಾಗು ಜೆಎನ್ ಯು ಏಕೆ ಪ್ರಶ್ನೆಗಳನ್ನು ಕೇಳುತ್ತದೆ. ಇಸ್ಲಾಮ್ ನಲ್ಲೂ ಕೊರತೆಗಳಿವೆ. ಇಸ್ಲಾಮ್ ನ ಇತಿಹಾಸದ ಬಗ್ಗೆ ಕಲಿಸುವಾಗ ನಾವಿದ್ದನ್ನು ಹೇಳಬೇಕಾಗುತ್ತದೆ. ಸಂಜಯ್ ಲೀಲಾ ಭನ್ಸಾಲಿಯಂತಹವರು ವಿದ್ಯಾರ್ಥಿಗಳಿಗೆ ಇತಿಹಾಸವನ್ನು ಕಲಿಸುವುದಿಲ್ಲ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News